ಧರ್ಮಸ್ಥಳ ಕೇಸ್: ಕೊನೆಗೂ ಆ ಮಹತ್ವದ ತನಿಖೆಗೆ ಸಮಯ ಬಂದೇ ಬಿಡ್ತು

Krishnaveni K

ಮಂಗಳವಾರ, 12 ಆಗಸ್ಟ್ 2025 (11:34 IST)
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಅನಾಮಿಕ ನೀಡಿದ ದೂರಿನನ್ವಯ ಎಸ್ಐಟಿ ತಂಡ ಈಗ ಆತನನ್ನು ಕರೆದುಕೊಂಡು ಹೋಗಿ ಧರ್ಮಸ್ಥಳದ ಸುತ್ತಮುತ್ತ ಆತ ತೋರಿಸಿದ ಜಾಗಗಳಲ್ಲಿ ಹುಡುಕಾಟ ನಡೆಸುತ್ತಿದೆ. ಇಂದು  ಕೊನೆಗೂ ಆ ಮಹತ್ವದ ತನಿಖೆಗೆ ಸಮಯ ಬಂದೇ ಬಿಡ್ತು.

ಅನಾಮಿಕ ದೂರುದಾರ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದ. ಈ ಸ್ಥಳಗಳಲ್ಲಿ ತಾನು ಶವಗಳನ್ನು ಹೂತು ಹಾಕಿದ್ದೇನೆ ಎಂದಿದ್ದ. ಇದಲ್ಲದೆಯೂ ಕೆಲವು ಸ್ಥಳಗಳಲ್ಲಿ ಎಸ್ಐಟಿ ಮಣ್ಣು ಅಗೆದು ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸಿತ್ತು.

ಆದರೆ 13 ನೇ ಪಾಯಿಂಟ್ ನಲ್ಲಿ ಇದುವರೆಗೆ ಹುಡುಕಾಟ ನಡೆಸಿರಲಿಲ್ಲ. ಹೀಗಾಗಿ ಎಲ್ಲರಿಗೂ ಈ ಪಾಯಿಂಟ್ ನ ಮೇಲೆ ಕುತೂಹಲವಿದೆ. ಕೊನೆಗೂ ಇಂದು 13 ನೇ ಪಾಯಿಂಟ್ ನಲ್ಲಿ ಎಸ್ಐಟಿ ತಂಡ ಹುಡುಕಾಟ ನಡೆಸಲಿದೆ ಎಂದು ತಿಳಿದುಬಂದಿದೆ.

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪವೇ 13 ನೇ ಪಾಯಿಂಟ್ ಇದೆ. ಈ ಸ್ಥಳ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಲ್ಲಿ ಮಣ್ಣು ಅಗೆದು ಪರಿಶೀಲನೆ ಮಾಡುವುದು ಕಷ್ಟ. ಹೀಗಾಗಿ ಜಿಪಿಆರ್ ಬಳಸಿ ಇಂದು ಶೋಧ ಕಾರ್ಯ ನಡೆಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ