ಮುಸ್ಲಿಂ ಮೀಸಲಾತಿಯನ್ನ ರದ್ದು ಪಡಿಸಿರುವ ವಿಚಾರವಾಗಿ ಜೆಡಿಎಸ್ ನಿಂದ ಧರಣಿ

ಸೋಮವಾರ, 27 ಮಾರ್ಚ್ 2023 (16:40 IST)
ಮುಸ್ಲಿಂ ಮೀಸಲಾತಿಯನ್ನ ರದ್ದು ಪಡಿಸಿರುವ ವಿಚಾರವಾಗಿ ಜೆಡಿಎಸ್ ಪಕ್ಷದಿಂದ ಪ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಧರಣಿ ನಡೆಸಲಾಗಿದೆ.
 
ಈ ವೇಳೆ ಮಾತನಾಡಿದ ಸಿಎಂ ಇಬ್ರಾಹಿಂ ಕಾನೂನಿನ ಮುಂದೆ ಇದಕ್ಕೆ ಮಾನ್ಯತೆ ಇಲ್ಲ.ಒಂದು‌ ತಿಂಗಳಲ್ಲಿ ಸಾಯೋರು ಇವರು.ಮುಂದೆ ಬರ್ತಾರೆ ಅನ್ನೊ ಖಾತ್ರಿ ಇಲ್ಲ.ತೇಜಸ್ವಿ ಸೂರ್ಯ,ಬಿಜೆಪಿಯವ್ರು ಮುಸ್ಲಿಂಮರು ಹಿಂದುಳಿದವ್ರು.ಶಿಕ್ಷಣ‌ ಇಲ್ಲ ಸೌತೆಕಾಯಿ ಮಾರೋರು,ಪಂಚರ್ ಹಾಕೋರು ಅಂದ್ರು.‌ನೀವೆ ಹಿಂದುಳಿದವ್ರು ಅಂದು ಈಗ ಮುಂದುವರಿದವ್ರ ಲಿಸ್ಟ್ ಗೆ ಸೇರಿಸಿದ್ರಿ ಬೊಮ್ಮಾಯಿಯವರೇ ?ಬೊಮ್ಮಾಯಿಯವರು ಅವರ ತಂದೆಯ ಹೆಸರಿಗೆ ತಿಲಾಂಜಲಿ‌ ಇಟ್ಟುಬಿಟ್ರು.ಹಿಜಾಬ್, ಹಲಾಲ್ ಆಯ್ತು. ಇದ್ಯಾವುದು ನಡೆದಿಲ್ಲ.ಹೀಗಾಗಿ‌ ಕೊನೆ ಅಸ್ತ್ರ ಅಂತ ಇದನ್ನ ಬಿಟ್ಟಿದ್ದಾರೆ. ಇದ್ಯಾವುದು ನಡೆಯಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ