ಕಾಂಗ್ರೆಸ್, ಜೆಡಿಎಸ್ ನ ಸಿಂಗಲ್ ಎಂಎಲ್ಎ ಬಿಜೆಪಿಗೆ ಹೋಗಲ್ಲ ಎಂದವರಾರು?
ಬಿಜೆಪಿಯ ಎಲ್ಲಾ ಬಾಂಬ್ ಗಳು ಠುಸ್ಸ್ ಆಗಿವೆ. ಬಾಂಬೆಯಿಂದ ಎಲ್ಲಾ ಶಾಸಕರು ವಾಪಸ್ ಬಂದಿದ್ದಾರೆ. ಹೀಗಂತ ಸಚಿವರೊಬ್ಬರು ಅಣಕ ಮಾಡಿದ್ದು, ಬಿಎಸ್ವೈ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಸಿಹಿ ಸುದ್ದಿ ಎಲ್ಲಿದೆ ಹೇಳರೀ ಯಡಿಯೂರಪ್ಪನವರೇ… ಆ ಸಿಹಿಯನ್ನು ಕರ್ನಾಟಕ ಇಲ್ಲಾ ದೆಹಲಿಯಿಂದ ತರುತ್ತೀರಾ..?
ಇಲ್ಲಾ ವಿದೇಶದಿಂದ ಬರಬೇಕಾ..? ಎಂದು ಬಿಎಸ್ ವೈ ವಿರುದ್ಧ ಸಚಿವ ಬಂಡೆಪ್ಪ ಖಾಶೆಂಪೂರ್ ವ್ಯಂಗ್ಯವಾಡಿದ್ದಾರೆ.
ಬೀದರ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್ ಹೇಳಿಕೆ ನೀಡಿದ್ದು, ಬಿಜೆಪಿಯ ಎಲ್ಲಾ ಬಾಂಬ್ ಗಳು ಠುಸ್ಸ್ ಆಗಿವೆ.
ಬಾಂಬೆಯಿಂದ ಎಲ್ಲಾ ಶಾಸಕರು ವಾಪಸ್ ಬಂದಿದ್ದಾರೆ. ಕಾಂಗ್ರೆಸ್ ಅಥವಾ ಜೆಡಿಎಸ್ ನ ಸಿಂಗಲ್ ಎಂಎಲ್ಎಗಳು ಬಿಜೆಪಿ ಹೋಗಲ್ಲ. ಬಿಜೆಪಿ ಡೊಂಬರಾಟಕ್ಕೆ ರಾಜ್ಯದ ಜನ ತಕ್ಕ ಉತ್ತರ ಕೊಡತ್ತಾರೆ ಎಂದರು.