ಮೇಲ್ಮನೆಯಲ್ಲಿದ್ದವಳ ಗಂಡನ ಜೊತೆ ಕೆಳಮನೆಯಲ್ಲಿದ್ದವನ ಹೆಂಡತಿ ಪರಾರಿ?

ಶುಕ್ರವಾರ, 20 ಜನವರಿ 2023 (19:15 IST)
ಒಂದೇ ಕಟ್ಟಡ.ಅಲ್ಲಿ ಎರಡು ಕುಟುಂಬ ವಾಸವಿದೆ.ಇದ್ದಕ್ಕಿದ್ದಂತೆ ಮೇಲ್ಮನೆಯಲ್ಲಿದ್ದವನ ಪತಿ.ಕೆಳ ಮನೆಯಲ್ಲಿದ್ದವನ ಪತ್ನಿ ಕಾಣೆಯಾಗಿಬಿಟ್ಟಿದ್ರು.ಇಬ್ಬರು ಕಾಣೆಯಾದ ಬಗ್ಗೆ 2 ಪ್ರತ್ಯೇಕ ದೂರು ದಾಖಲಾಗಿದೆ.ಪೊಲೀಸ್ ಠಾಣೆ ಎದುರು ಎಫ್ಐಆರ್ ಪ್ರತಿ ಹಿಡಿದು ನಿಂತಿರೊ ಇವರ ಹೆಸರು ಮುಬಾರಕ್ ಮತ್ತು ಝೀನತ್.ಇಬ್ಬರು ಜ್ಙಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿನಗರ ನಿವಾಸಿಗಳು.ಇಬ್ರು ಹೀಗೆ ಠಾಣೆ ಮೆಟ್ಟಿಲೇರೋಕು ಬಲವಾದ ಕಾರಣ ಇದೆ.ಅಯ್ಯೋ ನನ್ನ ಪತಿ ಕಾಣೆಯಾಗಿದ್ದಾನೆ,ಪೊಲೀಸರು ಹುಡುಕಿಕೊಡ್ತಿಲ್ಲ ಅಂತಾ ಝೀನತ್ ಹೇಳಿದ್ರೆ.ನನ್ನ ಪತ್ನಿ ಕೂಡ ಕಾಣಿಸ್ತಿಲ್ಲ ಅಂತಾ ಮುಬಾರಕ್ ಗೋಳುತೋಡಿಕೊಂಡಿದ್ದ.

ವಿಚಿತ್ರ ಕಹಾನಿ.ಆದರೂ ಸತ್ಯ.ಕೆಳಮನೆಯಲ್ಲಿದ್ದ ಹೆಂಡತಿ ಕಾಣ್ತಿಲ್ಲ ಮೇಲಿನ ಮನೆಯಲ್ಲಿರೊ ಗಂಡ ಕಾಣ್ತಿಲ್ಲ.ಕೆಳ ಮಹಡಿಯ ಗಂಡ ಮೇಲ್ಮನೆಯಲ್ಲಿರುವ ಹೆಂಡತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಅದು ಕೂಡ ಹೆಂಡತಿ ಕಾಣೆ ಅಂತಾ ಗಂಡನಿಂದ ದೂರು ದಾಖಲಾಗಿದ್ರೆ .ಗಂಡ ಕಾಣೆಯಾಗಿದ್ದಾನೆ ಅಂತಾ ಹೆಂಡತಿಯಿಂದ ದೂರು ದಾಖಲಾಗಿದೆ.ಇಂರಸ್ಟಿಂಗ್ ವಿಚಾರ ಅಂದ್ರೆ ಆಕೆಯ ಗಂಡ ಈಕೆಯ ಹೆಂಡತಿಯೊಂದಿಗೆ ಪರಾರಿ ಆಗಿದ್ದಾರೆ ಅನ್ನೋ ಶಂಕೆ ವ್ಯಕ್ತಪಡಿಸಿದ್ದಾರೆ.12 ವರ್ಷದ ಹಿಂದೆ ವಿವಾಹವಾಗಿದ್ದ ನವೀದ್ ಮತ್ತು ಝೀನತ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.8 ವರ್ಷದ ಹಿಂದೆ ವಿವಾಹವಾಗಿದ್ದ ಮುಬಾರಕ್ ಮತ್ತು ಶಾಜಿಯಾ ದಂಪತಿಗೂ ಇಬ್ಬರು ಮಕ್ಕಳು.ಎರಡೂ ಕುಟುಂಬ ಒಂದೇ ಕಟ್ಟಡದಲ್ಲಿ ವಾಸವಿದ್ದರಿಂದ 
ಕೆಳ ಮಹಡಿಯಲ್ಲಿದ್ದ ಮುಬಾರಕ್ ಎಂಬಾತನ ಪತ್ನಿ ಶಾಜಿಯಾಗೂ ,ಎರಡನೇ ಮಹಡಿಯಲ್ಲಿದ್ದ ಝೀನತ್ ಪತಿ ನವೀದ್ ಎಂಬಾತನಿಗೆ ಸಂಬಂಧ ಬೆಳೆದಿದೆ.ಮೂರು ತಿಂಗಳಿಂದ ಪರಸ್ಪರ ಫೋನ್ ಮೂಲಕ ಮಾತನಾಡಿಕೊಳ್ತಿದ್ರಂತೆ.ಇಬ್ರು ಇದ್ದಕ್ಕಿದ್ದಂತೆ 2022 ರ ಡಿಸಂಬರ್ 9 ರಂದು ಕಾಣೆಯಾಗಿದ್ದಾರೆ.ಹಾಗಾಗಿ ಇಬ್ಬರ ಮಧ್ಯೆ ಅಕ್ರಮ ಸಂಬಂಧವಿದ್ದು ಒಟ್ಟಿಗೆ ಹೋಗಿದ್ದಾರೆ ಅಂತಾ ಶಾಜಿಯಾ ಪತಿ ನವೀದ್ ಮತ್ತು ನವೀದ್ ಪತ್ನಿ ಝೀನತ್ ಒಟ್ಟಿಗೆ ಠಾಣೆ ಮೆಟ್ಟಿಲೇರಿದ್ದಾರೆ.ಇಷ್ಟೇ ಅಲ್ಲ ನನ್ನ ಪುಟ್ಟಮಗಳನ್ನು ಪತ್ನಿ ಕರೆದುಕೊಂಡು‌ಹೋಗಿಬಿಟ್ಟಿದ್ದಾಳೆ ಹುಡುಕಿಕೊಡಿ ಅಂತಾ ಮುಬಾರಕ್ ಬೇಡಿಕೊಂಡಿದ್ದಾರೆ
ಸದ್ಯ ಝೀನತ್ ಮತ್ತು ಮುಬಾರಕ್ ಇಬ್ಬರಿಂದ ಜ್ಙಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ‌ ದೂರು ದಾಖಲಾಗಿದೆ ವಿಪರ್ಯಾಸ ಅಂದ್ರೆ ಪೊಲೀಸರಿಗೂ ಇವರ ನೋವು ಅರ್ಥವಾಗ್ತಿಲ್ಲ.ದೂರು ನೀಡಿ ಒಂದು ತಿಂಗಳು ಕಳೆದರೂ ಕಾಣೆಯಾದವರನ್ನ ಪತ್ತೆ ಮಾಡ್ತಿಲ್ಲ ಅಂತಾ ಅಳಲು ತೋಡಿಕೊಂಡಿದ್ದಾರೆ.ಜ್ಙಾನಭಾರತಿ ಇನ್ಸ್ ಪೆಕ್ಟರ್ ವಿರುದ್ಧ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಮೌಖಿಕ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ