ಸರ್ಕಾರಿ ಉದ್ಯೋಗ ಸಿಗಲಿಲ್ಲ ಎಂದು ಹೀಗೆ ಮಾಡೋದಾ?

ಶನಿವಾರ, 26 ಆಗಸ್ಟ್ 2023 (10:53 IST)
ರಾಯಚೂರು : ಸರ್ಕಾರಿ ಉದ್ಯೋಗ ಕೈತಪ್ಪಿದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಡೆತ್ ನೋಟ್ ಬರೆದು ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.

ಚಿಕ್ಕಬೂದೂರು ಗ್ರಾಮದ 25 ವರ್ಷದ ಯುವಕ ಚನ್ನಬಸವ ದೇವದುರ್ಗದ ಖಾಸಗಿ ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

6 ರಿಂದ 8ನೇ ತರಗತಿ ಶಿಕ್ಷಕರ ಹುದ್ದೆ ನೇಮಕಾತಿ ಮೊದಲ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಚನ್ನಬಸವನಿಗೆ ಕೊನೆಗೆ ಉದ್ಯೋಗ ಕೈತಪ್ಪಿತ್ತು. ಬಳಿಕ ಮತ್ತೊಂದು ಬಾರಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ಚನ್ನಬಸವ, ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಪರೀಕ್ಷೆ ಪಾಸ್ ಮಾಡಲು ದೇವದುರ್ಗದಲ್ಲಿ ಪ್ರತ್ಯೇಕ ರೂಮ್ ಮಾಡಿಕೊಂಡು ತಯಾರಿ‌ ನಡೆಸಿದ್ದ. ಆದ್ರೆ ಮನನೊಂದು ಏಕಾಏಕಿ ಆಡಳಿತ ವ್ಯವಸ್ಥೆ ವಿರುದ್ಧ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಎಲ್ಲರನ್ನು ನಾನು ಕ್ಷಮೆಯಾಚಿಸುತ್ತಾ. ನಾನು ತೆಗೆದುಕೊಂಡ ನಿರ್ಧಾರ ಸರಿಯೋ ತಪ್ಪೋ ಗೊತ್ತಿಲ್ಲ. ಆದ್ರೆ ನನ್ನ ಮನಸ್ಸು ಆತ್ಮ ನನ್ನನ್ನು ಅಗಲಿದ ಅನುಭವವಾಗುತ್ತಿದೆ. ಯಾರೋ ಮಾಡಿದ ತಪ್ಪಿಗೆ ವ್ಯವಸ್ಥೆ ನನಗೆ ಶಿಕ್ಷೆ ನೀಡಿದ ಆಡಳಿತ ವ್ಯವಸ್ಥೆಗೆ ನನ್ನ ಧಿಕ್ಕಾರವಿರಲಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ