World Nutrition Day: ಯಾವ ಪೋಷಕಾಂಶ ಕೊರತೆಯಾದ್ರೆ ಯಾವ ಲಕ್ಷಣಗಳು ಇರುತ್ತವೆ ನೋಡಿ

Krishnaveni K

ಸೋಮವಾರ, 1 ಸೆಪ್ಟಂಬರ್ 2025 (10:08 IST)
Photo Credit: X
ಇಂದು ವಿಶ್ವ ಪೋಷಕಾಂಶ ದಿನವಾಗಿದ್ದು ನಮ್ಮ ದೇಹದಲ್ಲಿ ಯಾವ ಪೋಷಕಾಂಶ ಕೊರತೆಯಾದರೆ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತವೆ ಎಂದು ಇಲ್ಲಿ ನೀಡಿದ್ದೇವೆ ನೋಡಿ.

ಕೈ-ಕಾಲು ಗಂಟುಗಳಲ್ಲಿ ನಡೆಯುವಾಗ ನೋವು, ಕಟ ಕಟ ಶಬ್ಧವಾಗುತ್ತಿದ್ದರೆ ಕ್ಯಾಲ್ಶಿಯಂ ಅಂಶ ಕೊರತೆಯಾಗಿದೆ ಎಂದರ್ಥ. ಹಾಲು, ಮಜ್ಜಿಗೆಯಂತಹ ಡೈರಿ ಉತ್ಪನ್ನಗಳು ಕ್ಯಾಲ್ಶಿಯಂ ಅಂಶ ಕೊರತೆ ನೀಗಿಸುತ್ತದೆ.

ವಸಡುಗಳಲ್ಲಿ ರಕ್ತ ಬರುವುದು, ಆಗಾಗ ಬಾಯಿ ಹುಣ್ಣಾಗುವುದು ವಿಟಮಿನ್ ಸಿ ಕೊರತೆಯಿಂದ. ಇದಕ್ಕಾಗಿ ವಿಟಮಿನ್ ಸಿ ಅಂಶ ಹೆಚ್ಚಿರುವ ನಿಂಬೆ, ಕಿತ್ತಳೆ, ನೆಲ್ಲಿಕಾಯಿಯಂತಹ ಹಣ್ಣು-ತರಕಾರಿಗಳನ್ನು ತಿನ್ನಬೇಕು.

ಉಗುರಿನಲ್ಲಿ ಬಿಳಿ ಕಲೆ ಕಂಡುಬಂದರೆ ಝಿಂಕ್ ಕೊರತೆಯಿದೆ ಎಂದರ್ಥ. ಝಿಂಕ್ ಕೊರತೆ ನೀಗಿಸಲು ನಟ್ಸ್, ಡ್ರೈ ಫ್ರೂಟ್ಸ್, ಮೊಳಕೆ ಕಾಳುಗಳನ್ನು ತಿನ್ನಬೇಕು.

ಪಾದ ಒಡೆಯುವುದು, ಕಣ್ಣು ಕೆಂಪಗಾಗುವುದು, ಬಾಯಿ ಹುಣ್ಣು ವಿಟಮಿನ್ ಬಿ ಕೊರತೆಯಿಂದ ಆಗುವುದು. ಇದನ್ನು ನೀಗಿಸಲು ರಾಗಿ ಮುದ್ದೆ, ಹಾಲು, ಮೊಳಕೆ ಕಾಳು ಸೇವನೆ ಮಾಡಿದರೆ ಕೊರತೆ ನೀಗುವುದು.

ಕಾಲುಗಳಲ್ಲಿ ಸೆಳೆತ, ಕಣ್ಣಿನ ಕೆಳ ಭಾಗ ಕೆಂಪಾಗುವುದು ಇತ್ಯಾದಿ ಕಬ್ಬಿಣದಂಶ ಕೊರತೆಯಿಂದ ಆಗವುದು. ಇದಕ್ಕಾಗಿ ದಾಳಿಂಬೆ, ಸೊಪ್ಪು ತರಕಾರಿಯಂತಹ ಕಬ್ಬಿಣದಂಶವಿರುವ ಆಹಾರ ಸೇವನೆ ಮಾಡಿ.

ಈ ವಿಟಮಿನ್ ಗಳ ಕೊರತೆ ನೀಗಿಸಲು ಆದಷ್ಟು ಹೊರಗಿನ ಆಹಾರ ಬಿಟ್ಟು ಮನೆಯ ಆಹಾರವನ್ನೇ ಸೇವನೆ ಮಾಡುವುದು ಅಭ್ಯಾಸ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ