ಕುಕ್ಕೆ ಸುಬ್ರಹ್ಮಣ್ಯಕ್ಕೆ ರೌಡಿ ಶೀಟರ್ ಅಧ್ಯಕ್ಷ: ಯಾಕೆ ಆಗಬಾರದು ಎಂದ ಸಚಿವ ದಿನೇಶ್ ಗುಂಡೂರಾವ್

Krishnaveni K

ಶುಕ್ರವಾರ, 16 ಮೇ 2025 (12:40 IST)
Photo Credit: X
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟ್ ಗೆ ಮಾಜಿ ರೌಡಿ ಶೀಟರ್, ಕಾಂಗ್ರೆಸ್ ನಾಯಕ ಹರೀಶ್ ಗೌಡರನ್ನು ಆಯ್ಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ದಿನೇಶ್ ಗುಂಡೂರಾವ್ ಯಾಕೆ ಆಗಬಾರದು ಎಂದಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಹರೀಶ್ ಗೌಡ ಈಗ ರೌಡಿ ಶೀಟರ್ ಅಲ್ಲ. ಮಾಜಿ ರೌಡಿ ಶೀಟರ್. ರೌಡಿ ಶೀಟರ್ ಗಳು ಸುಧಾರಣೆಯಾಗಬಾರದಾ? ಅವರು ಈಗ ಹಾಗಿಲ್ಲ. ಹಾಗಾಗಿ ಅವರು ಅಧ್ಯಕ್ಷರಾದರೆ ತಪ್ಪೇನು ಎಂದಿದ್ದಾರೆ.

ಇನ್ನು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಹರೀಶ್ ಗೌಡರನ್ನು ನೇಮಕ ಮಾಡಲು ತಾವೇ ಪತ್ರ ಬರೆದು ಸೂಚಿಸಿದ್ದು ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು ಅವರ ನೇಮಕ ಮಾಡಲು ನಾನು ಹೇಳಿದ್ದು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು, ದಕ್ಷಿಣ ಕನ್ನಡ ಜಿಲ್ಲೆಗೆ ಸಚಿವ ಸ್ಥಾನ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಕಾಂಗ್ರೆಸ್ ಗೆ ವೋಟ್ ಹಾಕಿ ಹೆಚ್ಚು ಸ್ಥಾನ ಗೆಲ್ಲಿಸಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು. ಇಲ್ಲಿಂದ ಹೆಚ್ಚು ಜನ ಗೆದ್ದಿಲ್ಲ ಅಲ್ವಾ ಎಂದು ಮರುಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ