ಬೆಂಗಳೂರು: ರಾಜ್ಯದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಂಭ್ರಮದಿಂದ ವಿಘ್ನ ವಿನಾಶಕನ ಆರಾಧನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗಣೇಶನ ಮೂರ್ತಿಗೆ 60 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಬಳಿಕ ಚಿನ್ನದ ಸರದ ಸಮೇತ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಅಚ್ಚರಿ ಏನೆಂದರೆ ರಾತ್ರಿ ಮಲಗುವ ವೇಳೇ ಚಿನ್ನದ ಸಮೇತ ಮೂರ್ತಿ ವಿಸರ್ಜನೆ ಮಾಡಿರುವುದಾಗಿ ನೆನಪಿಗೆ ಬಂದಿದೆ. ಕೂಡಲೇ ಮೂರ್ತಿ ವಿಸರ್ಜನೆ ಮಾಡಿದ ಸ್ಥಳದಲ್ಲೇ ಸ್ಥಳೀಯರು ಚಿನ್ನದ ಸರಕ್ಕೆ ಹುಡುಕಾಟ ನಡೆಸಿದ್ದಾರೆ.
ಇಂದು ಬೆಳಗ್ಗಿನ ಜಾವ ಚಿನ್ನದ ಸರ, ವಿಸರ್ಜನೆ ಮಾಡಿದ ಸ್ಥಳದಲ್ಲೇ ಸಿಕ್ಕಿದೆ. ಸರ ನೋಡಿದ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.