ಭ್ರಷ್ಟಾಚಾರ ಸ್ವಜನ ಪಕ್ಷಪಾತದಿಂದ ಇಡೀ ವ್ಯವಸ್ಥೆ ಹಾಳಾಗಿದೆ: ಸಂತೋಷ್ ಹೆಗ್ಡೆ

ಸೋಮವಾರ, 23 ಮೇ 2016 (19:54 IST)
ಇಡೀ ಸಮಾಜವನ್ನು ಬದಲಾಯಿಸುತ್ತೇವೆ ಎಂದು ಹೊರಡುವುದರ ಬದಲು ಸಾರ್ವಜನಿಕರು ಎಚ್ಚೆತ್ತುಕೊಂಡು ಭ್ರಷ್ಟರಿಗೆ ಕಡಿವಾಣ ಹಾಕಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಸಲಹೆ ನೀಡಿದ್ದಾರೆ.
 
ಹೊಸಪೇಟೆ ತಾಲೂಕಿನ ಪ.ಯ.ಗಣೇಶ ಅವರು ಬರೆದ 'ಭ್ರಷ್ಟಾಚಾರ ಮುಕ್ತ ಕರ್ನಾಟಕ ಪುಸ್ತಕ' ಬಿಡುಗಡೆ ಮಾಡಿ ಮಾತನಾಡಿದ  ಎನ್.ಸಂತೋಷ್ ಹೆಗ್ಡೆ, ಭ್ರಷ್ಟಾಚಾರ ಸ್ವಜನ ಪಕ್ಷಪಾತದಿಂದ ಇಡೀ ವ್ಯವಸ್ಥೆಯೇ ಹಾಳಾಗಿದೆ. ಭ್ರಷ್ಟರ ಪರವಾಗಿ ಮಾತನಾಡುವವರ  ಸಂಖ್ಯೆ ಅಧಿಕವಾಗುತ್ತಿದೆ. ಇದರಿಂದ ಸಾರ್ವಜನಿಕರು ಭ್ರಷ್ಟಾಚಾರದ ಬಂದು ಭಾಗವಾಗಿದ್ದಾರೆ ಎಂದು ಸರಳವಾಗಿ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. 
 
ಪ್ರತಿದಿನ ಭ್ರಷ್ಟಾಚಾರಿಗಳ ಸಂಖ್ಯೆ ಅಧಿಕವಾಗುತ್ತಿದೆ. ಸಾರ್ವಜನಿಕರ ಸಮಸ್ಯೆಗಳಾದ ರಸ್ತೆ, ಚರಂಡಿ ಬರ ಪರಿಸ್ಥಿತಿ ಕುರಿತು ಯಾವ ರಾಜಕಾರಣೀಯು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ