ಮಾಜಿ ಮುಖ್ಯ ಮಂತ್ರಿ ಕಡಿದಾಳ್ ಮಂಜಪ್ಪ ಅವರು ಶಿವಮೊಗ್ಗಕ್ಕೆ ಒಳ್ಳೆ ಹೆಸರನ್ನು ತಂದಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಪಖ್ಯಾತಿಯನ್ನು ತಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ರಾಜ್ಯದಲ್ಲೆ ಒಂದು ವಿಶೇಷವಾದ ಜಿಲ್ಲೆ ಇಲ್ಲಿ ಉಳುವವನೆ ಭೂಮಿಯ ಒಡೆಯ ಎಂಬ ಯೋಜನೆ ಜಾರಿಗೆ ಬಂದಿದ್ರೆ ಅದು ಕಾಂಗ್ರಸ್ ಸರ್ಕಾರದಿಂದ. ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರು ಶಿವಮೊಗ್ಗಕ್ಕೆ ಒಳ್ಳೆ ಹೆಸರನ್ನು ತಂದಿದ್ದರು.ಆದ್ರೆಶಿವಮೊಗ್ಗ ದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಆ ಖ್ಯಾತಿಯನ್ನು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಳಂಕ ಹೊತ್ತಿರುವ ಯಡಿಯೂರಪ್ಪ ಅವರನ್ನೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಬಿಂಬಿಸುತ್ತಿದೆ. ಮೊನ್ನೆ ಅಮಿತ್ ಶಾ ಅವರು ತೀರ್ಥಹಳ್ಳಿಗೆ ಬಂದಿದ್ರು.ಬಹುಶಃ ಕುವೆಂಪು ಅವರು ಬದುಕಿದ್ದಿದ್ರೆ ಅಮಿತ್ ಶಾ ಅವರನ್ನು ಆ ಜಾಗಕ್ಕೆ ಬರುವುದಕ್ಕೆ ಬಿಡುತ್ತಿರಲಿಲ್ಲ
ಕುವೆಂಪು ತಮ್ಮ ಸಾಹಿತ್ಯದಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಸರ್ಕಾರ ಹಿಂದೂ ಮುಸಲ್ಮಾನರ ಮಧ್ಯೆ ಕೋಮು ಗಲಭೆ ಎಬ್ಬಿಸುವಂತಹ ಸರ್ಕಾರವಾಗಿದೆ. ನಾವು ಕಳೆದ ಐದು ವರ್ಷದಲ್ಲಿ ನಮ್ಮ ಪ್ರಣಾಳಿಕೆ ಯಾವ ಆಶ್ವಾಸನೆ ಕೊಟ್ಟಿದ್ವಿ ಅದರಂತೆ ನಡೆದುಕೊಂಡಿದ್ದೇವೆ
ಬಿಜೆಪಿ ಅನ್ನಭಾಗ್ಯ ಯೋಜನೆ ಬಗ್ಗೆ ಟೀಕೆ ಮಾಡುತ್ತದೆ. ಆದರೆ ನಮ್ಮ ಆಡಳಿತದಲ್ಲಿ ಪ್ರತಿ ತಿಂಗಳು 4 ಕೋಟಿ ಜನರಿಗೆ ಮೂರು ಕೆಜಿ ಅಕ್ಕಿ ಕೊಡುತ್ತಿದ್ದೇವೆ ಕರ್ನಾಟಕ ಅಪೌಷ್ಠಿಕತೆ ಮುಕ್ತ, ಭ್ರಷ್ಟಾಚಾರ ಮುಕ್ತ, ಬಡತನ ಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ಆಡಳಿತ ನಡೆಸಿದ್ದೇವೆ ಎಂದರು.
ಪ್ರಾಥಮಿಕ ಶಾಲೆಯಿಂದ ಪೋಸ್ಟ್ ಗ್ರಾಜುಯೇಷನ್ ಉಚಿತ ವಿದ್ಯಾಭಾಸ ಹಾಗೂ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹಾಗೂ ಲ್ಯಾಪ್ ಟಾಪ್ ಕೊಡುವ ಯೋಜನೆ ಜಾರಿಗೆ ತರಲಿದ್ದೇವೆ ಎಂದು ಭರವಸೆ ನೀಡಿದರು.
ನಮ್ಮ ಸರ್ಕಾರದ ಯೋಜನೆಗಳ ಮುಂದೆ ಜೆಡಿಎಸ್ ಆಗ್ಲಿ ಅಥವಾ ಬಿಜೆಪಿಯಾಗಲಿ ನಮ್ಮಪ್ಪನಾಣೆ ಆಡಳಿತಕ್ಕೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.