‘ದಿವ್ಯಾಗೂ ಬಿಜೆಪಿ ನಾಯಕರಿಗೂ ಸಂಪರ್ಕವಿದೆ'
545 ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಕುರಿತು ಕಲಬುರಗಿಯಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಬಿ.ಆರ್ ಪಾಟೀಲ್ ಸುದ್ದಿಗೋಷ್ಟಿ ನಡೆಸಿದರು. ಹಿಂಬಾಗಿಲಿನಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ.ಎಲ್ಲಾ ಹಗರಣಗಳನ್ನ ಹೊರಹಾಕಿ ಈ ಸರ್ಕಾರ ಬೆತ್ತಲೆಯಾಗಿ ನಿಂತಿದೆ.ಬಿಜೆಪಿಗೂ ದಿವ್ಯಾ ಹಾಗರಗಿಗೂ ಸಂಬಂಧವಿಲ್ಲದಂತೆ ಅಂತರ ಕಾಯ್ದುಕೊಂಡಿದ್ದಾರೆ. 9 ವರ್ಷಗಳಿಂದ ನಾನು ಬಿಜೆಪಿ ಸಕ್ರಿಯ ಕಾರ್ಯಕರ್ತೆ ಅಂತಾ ದಿವ್ಯಾ ಬಯೋಡಾಟಾನಲ್ಲಿದೆ. ದಿವ್ಯಾ ಹಾಗರಗಿ ದಿಶಾ ಸಮಿತಿ ಸದಸ್ಯರಾಗಿದ್ದು, ಜೊತೆಗೆ ನರ್ಸಿಂಗ್ ಕೌನ್ಸಿಲ್ ಬೋರ್ಡ್‌ನ ಸದಸ್ಯರು ಆಗಿದ್ದಾರೆ. ಕಲಬುರಗಿಗೆ ಬರುವ ಬಿಜೆಪಿಯ ಎಲ್ಲಾ ಸಚಿವರು ದಿವ್ಯಾ ಹಾಗರಗಿ ಮನೆಗೆ ಹೋಗ್ತಾರೆ. ಇದಲ್ಲದೆ ಖುದ್ದು ಗೃಹ ಸಚಿವರು ಕೂಡ ದಿವ್ಯಾ ನಿವಾಸಕ್ಕೆ ಹೋಗಿದ್ದರು. ಇಷ್ಟೆಲ್ಲ ಗರಿಷ್ಠ ಸಂಬಂಧವಿದ್ದರೂ ಸಹ, ದಿವ್ಯಾಗೂ ಪಕ್ಷಕ್ಕೂ ಸಂಬಂಧವಿಲ್ಲವೆನ್ನುವುದು ಯಾಕೆ? ಬಿಜೆಪಿ ಪಲಾಯನವಾದಿ ತಂತ್ರ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.