ಪಾದರಾಯನಪುರದ ಪುಂಡರನ್ನುರಾಮನಗರಕ್ಕೆ ಶಿಫ್ಟ್ ಮಾಡಿದ ವಿಚಾರ; ಹೆಚ್.ಡಿಕೆ ಗೆ ತಿರುಗೇಟು ನೀಡಿದ ಡಿಜಿಪಿ

ಶುಕ್ರವಾರ, 24 ಏಪ್ರಿಲ್ 2020 (12:58 IST)

ಬೆಂಗಳೂರು : ರಾಮನಗರಕ್ಕೆ ಪಾದರಾಯನಪುರದ ಗೂಂಡಾಗಿರಿ ಪ್ರಕರಣದ ಪುಂಡರನ್ನು ಶಿಫ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಏಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಡಿಜಿಪಿ ಅಲೋಕ್ ಕುಮಾರ್ ತಿರುಗೇಟು ನೀಡಿದ್ದಾರೆ.

 

ಪಾದರಾಯನಪುರದಲ್ಲಿ ನಡೆದ ಘಟನೆಯ ಆರೋಪಿಗಳನ್ನು ರಾಮನಗರದ ಜೈಲಿಗೆ ಕಳಿಸಲಾಗಿತ್ತು. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರ ಹಾಗೂ ಪೊಲೀಸರ ಮೇಲೆ ಕಿಡಿಕಾರಿದ್ದರು.

 

ಇದಕ್ಕೆ ಪ್ರತಿಕ್ರಿಯೆ ನೀಡಿದ  ಡಿಜಿಪಿ ಅಲೋಕ್ ಕುಮಾರ್, ಪರಪ್ಪನ ಅಗ್ರಹಾರದಲ್ಲಿ 5,000ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಬಂಧಿತರನ್ನು ಬೆಂಗಳೂರಿನಲ್ಲಿ ಇರಿಸಲು ಸ್ಥಳ ಎಲ್ಲಿದೆ? ಸರ್ಕಾರದ ಆದೇಶದಂತೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಾನು ಸರ್ಕಾರಿ ನೌಕರ ಎಂದು ತಿರುಗೇಟು ನೀಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ