ಹಾಸನ ಲೋಕಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟ ಡಿಕೆ ಬ್ರದರ್ಸ್..!

ಶುಕ್ರವಾರ, 25 ಆಗಸ್ಟ್ 2023 (17:23 IST)
ಈ ಭಾರಿ ಹಾಸನ ಲೋಕಸಭಾ ಚುನಾವಣೆ ಗೆಲ್ಲಲು ಡಿಕೆ ಬ್ರದರ್ಸ್ ಪಣ ತೊಟ್ಟಿದ್ದಾರೆ.ನಿನ್ನೆ ಈಡೀ ದಿನ ಹಾಸನ ಜಿಲ್ಲೆಯಲ್ಲಿ ಡಿಕೆ ಶಿವಕುಮಾರ್,ಡಿಕೆ ಸುರೇಶ್ ಸಭೆ ಮಾಡಿದ್ದಾರೆ.ಎತ್ತಿನ ಹೊಳೆ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿ‌ ಈಡೀ ದಿನ ಯೋಜನೆ ಕುರಿತು ಡಿಸಿಎಂ ಚರ್ಚೆ ಮಾಡಿದ್ದಾರೆ.ಈ ಯೋಜನೆಯನ್ನ 100 ದಿನಗಳಲ್ಲಿ ಅನುಷ್ಠಾನಗೊಳಿಸುವ ಭರವಸೆಯನ್ನು ಆ ಭಾಗದ ಜನರಿಗೆ ನೀಡಿದ್ದಾರೆ ಈ ಮೂಲಕ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಸಮರ ಸಾರಿದ್ದಾರೆ.ಈ ಯೋಜನೆ ಮೂಲಕವೇ ಜನರನ್ನ ಸೇಳೆಯಬೇಕು ಎಂದು ಡಿಕೆ ಬ್ರದರ್ಸ್ ಪ್ಲಾನ್ ಮಾಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಡಿಕೆ ಸುರೇಶ್ ಹಾಸನ ಜಿಲ್ಲೆಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ರು.ಈ ವೇಳೆ ಸುರೇಶ್ ತಂತ್ರಗಾರಿಕೆ ವರ್ಕೌಟ್ ಆಗಿಲ್ಲ.ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಆದ್ರು ವರ್ಕೌಟ್ ಮಾಡಬೇಕು ಎಂದು ಗೌಡರ ಕುಟುಂಬವನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಹಿನ್ನಲೆ ಎತ್ತಿನ ಹೊಳೆ ಯೋಜನೆಯ ಜಾರಿಗೊಳಿಸುವುದಕ್ಕೆ ಡಿಕೆ ಬ್ರದರ್ಸ್ ಸೇರಿಕೊಂಡು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ