BJP ಮತ್ತು JDS ನಾಯಕರು ಕಾಂಗ್ರೆಸ್ ಸೇರ್ಪಡೆಗೊಂಡಿರುವ ವಿಚಾರ ಕುರಿತು ಬೆಂಗಳೂರಿನಲ್ಲಿ KPCC ಅಧ್ಯಕ್ಷ D.K. ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಇನ್ನು ಅನೇಕರು ಬರ್ತಾರೆ, ನಾನು ಹೆಸರು ಹೇಳೊಲ್ಲ, ಅವರಾಗಿ ಅವರು ಬರೋರನ್ನ ಸೇರಿಸಿಕೊಳ್ತೀವಿ ಎಂದು ತಿಳಿಸಿದ್ರು. BJPಯವರು ಯಾರ್ ಯಾರಿಗೆ ಆಶ್ವಾಸನೆ ಕೊಟ್ಟಿದ್ದಾರೋ ಅವರನ್ನು ಕರೆದು ಮಾತಾಡ್ತಿದ್ದಾರೆ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಸಚಿವ ನಾರಾಯಣಗೌಡ ಬರ್ತಾರೆ ಅಂತ ನಾವು ಹೇಳಿದ್ವಾ? BJPಯವರು ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ತಾರೆ, ಯಾರ್ ಯಾರು ಬರ್ತಾರೆ ಅಂತ ನಾನು ಈಗಲೇ ಹೇಳೊಲ್ಲ ಎಂದು ತಿಳಿಸಿದ್ರು. SC/ST ಮೀಸಲಾತಿ ವಿಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ನೀಡಿದ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಸರ್ಕಾರ SC/ST ಸಮುದಾಯಕ್ಕೆ ಮೋಸ ಮಾಡಿದೆ. ಕೇಂದ್ರ ಸರ್ಕಾರಕ್ಕೆ ಮೀಸಲಾತಿ ಪ್ರಸ್ತಾಪ ಹೋಗಿಲ್ಲ, ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಯಾವುದೇ ಮೀಸಲಾತಿ ಪ್ರಾಸ್ತಾವವೇ ಕಳಿಸಿಲ್ಲ. ಒಂದು ವೇಳೆ ಸರ್ಕಾರ ಮೀಸಲಾತಿ ವಿಚಾರ ಕೇಂದ್ರಕ್ಕೆ ಕಳುಹಿಸಿದರೇ ಅಲ್ಲಿ ಚರ್ಚೆ ಆಗಬೇಕು ಅಲ್ವ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.