Gold Rate: ಚಿನ್ನದ ಬೆಲೆಯಲ್ಲಿ ಇಂದು ಇಳಿಕೆಯಾಗಿದೆಷ್ಟು ಗೊತ್ತಾ

Sampriya

ಶನಿವಾರ, 4 ಅಕ್ಟೋಬರ್ 2025 (11:42 IST)
ಬೆಂಗಳೂರು: ಮಂಗಳವಾರ ಹಾಗೂ ಬುಧವಾರ ಚಿನ್ನದ ಬೆಲೆ ಗಣನೀಯವಾಗಿ ಬೆಲೆ ಹೆಚ್ಚಳದ ಬಳಿಕ ಇಂದು ಕೊಂಚ ಇಳಿಕೆ ಕಂಡಿದೆ. 

ಇಂದು 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ ಗ್ರಾಂನಲ್ಲಿ ₹1 ಇಳಿಕೆಯಾಗುವ ಮೂಲಕ 11,852ಕ್ಕೆ ಇಳಿದಿದೆ. 

ಇನ್ನೂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ₹1 ಇಳಿಕೆಯಾಗುವ ಮೂಲಕ ₹10864ಕ್ಕೆ ಇಳಿದಿದೆ. ಇನ್ನೂ 18ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ₹1 ಇಳಿಕೆಯಾಗುವ ಮೂಲಕ ₹8889 ಆಗಿದೆ. 


ಕಳೆದ ಕೆಲ ತಿಂಗಳಿನಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, ಗ್ರಾಹಕರು ಚಿನ್ನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. 

ಸಾಲು ಸಾಲು ಹಬ್ಬಗಳ ನಡುವೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿರುವುದು ಚಿನ್ನ ಖರೀದಿ ಪ್ಲಾನ್‌ನಲ್ಲಿರುವವರಿಗೆ ಶಾಕ್ ನೀಡಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ