ಮಂಗಳೂರು ಕುಕ್ಕರ ಬಾಂಬ್ ಬ್ಲಾಸ್ಟ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಚಿಲುಮೆ ಸಂಸ್ಥೆಯ ಅಕ್ರಮ ಮತದಾರರ ವೈಯುಕ್ತಿಕ ಡಾಟಾ ಸಂಗ್ರಹ ಕೇಸ್ ಅನ್ನ ಡೈವರ್ಟ್ ಮಾಡೋಕೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಬಿಜೆಪಿ ನಾಯಕರು ಬಳಸಿಕೊಂಡಿದ್ದಾರೆಂದು ಡಿಕೆಶಿ ಆರೋಪಿಸಿದ್ರು.ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಡಿಕೆಶಿ ವಿವಾದಾತ್ಮಕ ಹೇಳಿಕೆ ಕೊಟ್ಟ ಬೆನ್ನಲೇ ಬಿಜೆಪಿ ವರ್ಸೇಸ್ಸ್ ಕಾಂಗ್ರೆಸ್ ಟಾಕ್ ವಾರ್ ಸಮರ ಇಂದು ಕೂಡ ಮುಂದುವರೆದಿದೆ.
ಸಿಎಂ ಹೇಳಿಕೆಗೆ ಕೆಪಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ರಿಯಾಕ್ಟ್ ಮಾಡಿದ್ದಾರೆ. ಮತದಾರರ ಪಟ್ಟಿ ಡಿಲೀಟ್ ಆರೋಪ ಮರೆಮಾಚಲು ಕುಕ್ಕರ ಬ್ಲಾಸ್ಟ್ ಪ್ರಕರಣ ಫ್ರಂಟ್ ಲೈನ್ ಗೆ ಬಂದಿದೆ.ಮಂಗಳೂರು ಕುಕ್ಕರ ಸ್ಪೋಟ್ ಏನು ಕಾಶ್ಮೀರ, ಪುಲ್ವಾಮಾ ಘಟನೆ ರೀತಿ ನಡೆಯಿತಾ..? ತನಿಖೆಗೆ ನಡೆಯುವ ಮೊದಲೇ ಕುಕ್ಕರ ಬ್ಲಾಸ್ಟ್ ಮಾಡಿದವ್ರು ಉಗ್ರ ಎಂದು ಹೇಗೆ ಹೇಳಿದ್ರಿ..? ಎಂದು ಸರ್ಕಾರದ ಮೇಲೆ ಮತ್ತಷ್ಟು ಸವಾಲುಗಳನ್ನು ಡಿಕೆಶಿ ಎಸೆದಿದ್ದಾರೆ.