ಸರ್ಕಾರಿ ಹಾಸ್ಟೆಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿಗೆ ಹೆರಿಗೆ

ಶುಕ್ರವಾರ, 16 ಡಿಸೆಂಬರ್ 2022 (12:46 IST)
ಚಿಕ್ಕಮಗಳೂರು : ಇಲ್ಲಿನ ಸರ್ಕಾರಿ ಹಾಸ್ಟೆಲ್ನಲ್ಲಿ ಪಿಯುಸಿ ವಿದ್ಯಾರ್ಥಿನಿಗೆ ಹೆರಿಗೆ ಆಗಿರುವ ಘಟನೆ ನಡೆದಿದ್ದು, ದಲಿತ ಸಂಘಟನೆಗಳು ಹಾಸ್ಟೆಲ್ ವಾರ್ಡನ್ ಹಾಗೂ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿವೆ.

ನಗರದ ಬೇಲೂರು ರಸ್ತೆಯಲ್ಲಿ ಸುಮಾರು 200 ಹೆಣ್ಣು ಮಕ್ಕಳಿರುವ ಪಿಯುಸಿ ಹಾಸ್ಟೆಲ್ನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಓರ್ವ ವಿದ್ಯಾರ್ಥಿನಿಗೆ ಹೆರಿಗೆ ಆಗಿದೆ ಎಂದು ದಲಿತ ಸಂಘಟನೆಗಳು ದೂರಿವೆ.

ಪ್ರಕರಣವನ್ನ ಹೊರಬರಲು ಬಿಡದೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಹಾಸ್ಟೆಲ್ ವಾರ್ಡನ್ ಮುಚ್ಚಿ ಹಾಕಿದ್ದಾರೆ.

ವಿಷಯ ತಿಳಿದ ಕೂಡಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಕೇಳಿದ್ರೆ ಆಕೆ ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದಳು, ಗೊತ್ತಾಗಿಲ್ಲ. ಹಾಗಾಗಿ, ಆಕೆಯನ್ನ ಮನೆಗೆ ಕಳಿಸಿ ಹುಡುಗನ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದೇವೆ ಅಂತಾ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ