ಆರನೇ ಗ್ಯಾರಂಟಿ ಘೋಷಿಸಿದ ಡಿಕೆ ಶಿವಕುಮಾರ್: ಈ ದಿನ ಜಾರಿಗೆ ಬರಲಿದೆ

Krishnaveni K

ಗುರುವಾರ, 12 ಫೆಬ್ರವರಿ 2026 (16:09 IST)
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಆರನೇ ಗ್ಯಾರಂಟಿ ಘೋಷಿಸಲು ಮುಂದಾಗಿದೆ. ಆರನೇ ಗ್ಯಾರಂಟಿ ಬಗ್ಗೆ ಇಂದು ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ.

ಕರ್ನಾಟಕ ಸರ್ಕಾರ ಈಗಾಗಲೇ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದೆ. ಈ ಪೈಕಿ ಮಹಿಳೆಯರಿಗೆ ಉಚಿತ ಬಸ್, ಗೃಹಲಕ್ಷ್ಮಿ ಯೋಜನೆ ಜನಪ್ರಿಯವಾಗಿದೆ. ಆದರೆ ಗೃಹಲಕ್ಷ್ಮಿ ಹಣ ಸರಿಯಾಗಿ ಕ್ರೆಡಿಟ್ ಆಗುತ್ತಿಲ್ಲ ಎಂಬ ಆರೋಪಗಳೂ ಇವೆ.

ಅಲ್ಲದೆ, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳಿಗೆ ಹಣ ಸಾಲುತ್ತಿಲ್ಲ ಎಂದು ಕಾಂಗ್ರೆಸ್ ನ ಕೆಲವು ನಾಯಕರೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದೂ ಇದೆ. ಇದರ ನಡುವೆ ಈಗ ಆರನೇ ಗ್ಯಾರಂಟಿ ಘೋಷಿಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಮ್ಮ ಸರ್ಕಾರಕ್ಕೆ 1000 ನೇ ದಿನ ಪೂರೈಸಿದ ದಿನ ಆರನೇ ಗ್ಯಾರಂಟಿ ಘೋಷಿಸುವುದಾಗಿ ಹೇಳಿದ್ದಾರೆ. ಇದು ಸಾರ್ವಜನಿಕರಿಗೆ ನಿವೇಶನಿಗಳಿಗೆ ಭೂಮಿ ಒದಗಿಸುವ ಗ್ಯಾರಂಟಿಯಾಗಿರಲಿದೆ. ಭೂಮಿ ಹಕ್ಕುಗಳಿಲ್ಲದ ಸಾಕಷ್ಟು ಜನರಿಗೆ ಖಾತೆ ಮತ್ತು ಹಕ್ಕುಪತ್ರ ನೀಡುವ ಭೂಮಿ ಗ್ಯಾರಂಟಿ ಯೋಜನೆ ಸದ್ಯದಲ್ಲೇ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ