ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಿಪಕ್ಷಗಳ ಸಲಹೆ ಕೇಳಿದ ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಈವರೆಗೆ ನಮ್ಮ ಮಾತು ಕೇಳಲೇ ಇಲ್ಲ. ಇಷ್ಟಬಂದಂತೆ ಅವರೇ ತೀರ್ಮಾನಗಳನ್ನು ಕೈಗೊಂಡಿದ್ರು. ಈಗ ಪರಿಸ್ಥಿತಿ ಕೈಮೀರಿದಾಗ ನಮಗೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಸಮಯದಲ್ಲಿ ಲಾಕ್ ಡೌನ್ ಪ್ರಯೋಜನವಿರಲಿಲ್ಲ. ಒಂದು ಕಡೆ ಜೀವ, ಮತ್ತೊಂದೆಡೆ ಜೀವನ ಎರಡೂ ಮುಖ್ಯ, ಬ್ಯಾಂಕ್ ನವರು 1 ವರ್ಷದ ಸಾಲದ ಬಡ್ಡಿಯನ್ನ ನಿಲ್ಲಿಸಿಲ್ಲ. ರಾಜ್ಯದಲ್ಲಿ ಹೋಟೆಲ್ ಗಳನ್ನು ಮಾರುವ ಪರಿಸ್ಥಿತಿ ಬಂದಿದೆ ಎಂದು ಅವರು ತಿಳಿಸಿದ್ದಾರೆ.