ಲಾಕ್ ಡೌನ್ ಬಗ್ಗೆ ಊಹಾಪೋಹ ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು- ಗೃಹಸಚಿವರು

ಬುಧವಾರ, 14 ಏಪ್ರಿಲ್ 2021 (10:19 IST)
ಬೆಂಗಳೂರು : ಲಾಕ್ ಡೌನ್ ಊಹಾಪೋಹಗಳನ್ನು ನಂಬಬೇಡಿ. ಲಾಕ್ ಡೌನ್ ಬಗ್ಗೆ ಊಹಾಪೋಹ ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಲಾಕ್ ಡೌನ್ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಲಾಕ್ ಡೌನ್ ಮಾಡದೇ ಕೊರೊನಾ ಕಂಟ್ರೋಲ್ ಮಾಡಬಹುದು. ಕಳೆದ ಬಾರಿ ಕೊರೊನಾ ನಿಭಾಯಿಸಿದ ಅನುಭವವಿದೆ. ಕಟ್ಟುನಿಟ್ಟಿನ ಕ್ರಮಗಳ ಪಾಲನೆಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಲಾಕ್ ಡೌನ್ ಬಗ್ಗೆ ಚರ್ಚೆ ಮಾಡಲಾಗುವುದು. ತಜ್ಞರ ವರದಿಯ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ವೀಕೆಂಡ್ ಲಾಕ್ ಡೌನ್ ಬಗ್ಗೆಯೂ ತೀರ್ಮಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ