ಕೇಂದ್ರ ಸರ್ಕಾರದ ಕ್ರೈಟೀರಿಯಾ ಪ್ರಕಾರವೇ ಬಿಪಿಎಲ್ ಕಾರ್ಡ್ ರದ್ದು ಮಾಡ್ತಿದ್ದೀವಿ: ಡಿಕೆ ಶಿವಕುಮಾರ್

Krishnaveni K

ಬುಧವಾರ, 20 ನವೆಂಬರ್ 2024 (16:23 IST)
ಬೆಂಗಳೂರು: ರಾಜ್ಯದಲ್ಲಿ ಈಗ ಬಿಪಿಎಲ್ ಕಾರ್ಡ್ ರದ್ದತಿ ವಿವಾದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಡಿಕೆ ಶಿವಕುಮಾರ್ ಬಿಪಿಎಲ್ ಕಾರ್ಡ್ ರದ್ದತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಿಪಿಎಲ್ ಕಾರ್ಡ್ ಕೊಡುವುದಕ್ಕೆ ಕೇಂದ್ರ ಸರ್ಕಾರದ ಕ್ರೈಟೀರಿಯಾ ಇದೆ. ಆ ಕ್ರೈಟೀರಿಯಾ ಪ್ರಕಾರವೇ ರದ್ದು ಮಾಡುತ್ತಿದ್ದೇವೆ. ಗಾಡಿ ಇರುವವುರಿಗೆ, ತೆರಿಗೆ ಕಟ್ಟುವರಿಗೆಲ್ಲಾ ಬಿಪಿಎಲ್ ಕಾರ್ಡ್ ಇದೆ. ಅದನ್ನೆಲ್ಲಾ ರದ್ದು ಮಾಡುತ್ತಿದ್ದೇವಷ್ಟೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಒಂದೊಂದು ಊರಿಗೆ 10-15 ಜನರಿಗೆ ತಪ್ಪಾಗಿ ಬಿಪಿಎಲ್ ಕಾರ್ಡ್ ರದ್ದಾಗಿದೆ. ಇದು ನಮ್ಮ ಗಮನಕ್ಕೂ ಬಂದಿದೆ. ಇಂತಹವರಿಗೆ ಮತ್ತೆ ಅರ್ಜಿ ಹಾಕಿದರೆ ಕೊಡುವ ವ್ಯವಸ್ಥೆ ಮಾಡುತ್ತೇವೆ. ನಮ್ಮ ಸರ್ಕಾರ ಇರುವುದೇ ಬಡವರಿಗಾಗಿ. ಬಡವರಿಗೆ ಯಾವುದೇ ಅನ್ಯಾಯವಾಗದ ಹಾಗೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಅಧಿಕಾರಿಗಳು ಮನೆ ಮನೆಗೆ ಹೋಗಿ ಪರಿಶೀಲನೆ ಮಾಡುತ್ತಾರೆ. ಯಾರಿಗೆ ಅರ್ಹರಿದ್ದಾರೆ ಅವರಿಗೆ ತಿರುಗಾ ಅರ್ಜಿ ತಗೊಂಡು ಕೊಟ್ಟೇ ಕೊಡುತ್ತೇವೆ. ಸಮಸ್ಯೆಗಳಾಗಿದೆ ಇಲ್ಲ ಎಂದು ಹೇಳಲ್ಲ. ಅದನ್ನು ಸರಿಪಡಿಸುತ್ತೇವೆ. ಇದಕ್ಕೆ ದಯವಿಟ್ಟು ಸಹಕಾರ ಕೊಡಬೇಕು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ