ಸರಕಾರಕ್ಕೆ 3 ದಿನ ಡೆಡ್ ಲೈನ್ ನೀಡಿದ ಡಿ.ಕೆ.ಶಿವಕುಮಾರ್

ಮಂಗಳವಾರ, 21 ಜುಲೈ 2020 (17:58 IST)
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮೂರುದಿನದ ಗಡುವನ್ನು ಕೆಪಿಸಿಸಿ ಅಧ್ಯಕ್ಷ ನೀಡಿದ್ದಾರೆ.

ನೆಲಮಂಗಲದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು, ಕೇಂದ್ರದ ಹಾಗೂ ರಾಜ್ಯದ ಹಣವನ್ನ ಒಟ್ಟಿಗೆ ನೀಡಿ.
ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ವಿಮೆ ಮಾಡಿಸಿ. 3000 ಸಹಾಯ ಧನ ಇಡೀ ರಾಜ್ಯದಲ್ಲಿ 10% ಕೊಟ್ಟಿರೋದು ಮಾತ್ರ ಎಂದಿದ್ದಾರೆ.  

ನುಡಿದಂತೆ ನಡೆಯಲಿಲ್ಲ ಯಡಿಯೂರಪ್ಪ ಸರ್ಕಾರ ಎಂದು ಜರಿದಿರುವ ಡಿಕೆಶಿ, ಕೋವಿಡ್ ಸಂಧರ್ಭದಲ್ಲಿ ಆಶಾ ಕಾರ್ಯಕರ್ತೆಯರು ದುಡಿಯುತಿದ್ದಾರೆ. ನಾನೇ ಹೋರಾಟ ನಡೆಸುವೆ. ಬೆಂಗಳೂರು ಚಲೋ ಕಾರ್ಯಕ್ರಮವನ್ನ ಅವರ ಬೆಂಬಲ ಪಡೆದು ರೂಪಿಸುವೆ ಎಂದಿದ್ದಾರೆ.  

ರಾಜ್ಯದ ಎಲ್ಲಾ ಹೆಣ್ಣು ಮಕ್ಕಳು ಬಂದು ನಿಮ್ಮ ಮನೆಗೆ ಮುತ್ತಿಗೆ ಹಾಕುತ್ತಾರೆ. ಮೂರು ದಿನಗಳಲ್ಲಿ ಸ್ಪಂದಿಸಬೇಕು ಇಲ್ಲದಿದ್ದರೆ  ಬೆಂಗಳೂರು ಚಲೋ ಸಿದ್ಧವಾಗಬೇಕಾಗುತ್ತದೆ ಎಂದು ಡಿಕೆಶಿ ಎಚ್ಚರಿಸಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ