ಕಾಲೇಜು ದಿನಗಳ ಸಾರಥಿಗೆ ಹೊಸ ಲುಕ್‌ ಕೊಟ್ಟು ಸಂಭ್ರಮಿಸಿದ ಡಿಕೆ ಶಿವಕುಮಾರ್‌

Sampriya

ಭಾನುವಾರ, 1 ಸೆಪ್ಟಂಬರ್ 2024 (17:34 IST)
Photo Courtesy X
ಬೆಂಗಳೂರು: ತಾನು ಕಾಲೇಜು ದಿನಗಳಲ್ಲಿ ಓಡಿಸುತ್ತಿದ್ದ ಬೈಕ್‌ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೊಸ ಲುಕ್ ನೀಡಿದ್ದಾರೆ.  ಧೂಳು ಹಿಡಿದಿದ್ದ ಬೈಕ್‌ ಅನ್ನು ಹೊಸ ಲುಕ್‌ನಲ್ಲಿ ನೋಡಿದ ಡಿಕೆಶಿ ಅಚ್ಚರಿಯಾಗಿದ್ದಾರೆ.

ಈ ಬೈಕ್ ಡಿಕೆ ಶಿವಕುಮಾರ್ ಅವರು ತಮ್ಮ ಕಾಲೇಜು ದಿನಗಳಲ್ಲಿ ಬಳಸಿದ್ದರು. ಅದಲ್ಲದೆ ಇದು ಅವರ ಮೊದಲ ಬೈಕ್ ಆಗಿದ್ದು, ಈ ಬೈಕ್‌ನೊಂದಿಗೆ ಸಾಕಷ್ಟು ನೆನಪುಗಳಿವೆ ಎಂದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಕಾಲೇಜ್ ಡೇಸ್ ನಲ್ಲಿ ಬೈಕ್ ಕ್ರೇಜ್ ಸಾಮಾನ್ಯ,

ನನ್ನ ಕಾಲೇಜು ದಿನಗಳಲ್ಲಿ ಓಡಿಸಿದ ಬೈಕ್ ಕೆಲ ವರ್ಷಗಳಿಂದ ಧೂಳು ಹಿಡಿದಿತ್ತು, ವಿಂಟೇಜ್ ಬೈಕ್ ಪ್ರೇಮಿಯಾದ ಸುಪ್ರಿತ್ ಎನ್ನುವ ಯುವಕ ಸಂಪೂರ್ಣವಾಗಿ ಮರು ನವೀಕರಣ ಮಾಡಿ ಇಂದು ನನಗೆ ಹಸ್ತಾಂತರಿಸಿದರು. ನನ್ನ ಮೊದಲ ಬೈಕ್ ಇದು, ಇದರೊಂದಿಗೆ ಸಾವಿರಾರು ನೆನಪುಗಳು ಬೆಸೆದುಕೊಂಡಿವೆ. ಆ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ