ಮಂಡ್ಯ ಕೈ ಮುಖಂಡರ ಸಭೆ ಕರೆದ ಡಿಕೆಶಿ
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.
ಬೆಂಗಳೂರಿನ ಕ್ರೆಸೆಂಟ್ ರಸ್ತೆಯ ಡಿಕೆ ಶಿವಕುಮಾರರ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿದೆ. ಸುಮಲತಾ ಸ್ಪರ್ಧೆ, ರೇವಣ್ಣ ಹೇಳಿಕೆಯಿಂದ ಗೊಂದಲ ಉಂಟಾಗಿರುವುದು ಸಭೆಯಲ್ಲಿ ಚರ್ಚೆಗೆ ಬರಲಿದೆ. ಮಂಡ್ಯ ಕಾಂಗ್ರೆಸ್ ಮುಖಂಡರಿಗೆ ಸಲಹೆ ನೀಡಲು ಸಭೆ ಕರೆಯಲಾಗಿದೆ.
ನಿಖಿಲ್ ಬೆಂಬಲಿಸುವ ಬಗ್ಗೆ ನಾಳೆ ಮುಖಂಡರಿಗೆ ಸೂಚನೆ ನೀಡಲಾಗುತ್ತದೆ. ಮೈತ್ರಿ ಧರ್ಮ ಪಾಲಿಸುವಂತೆ ಒತ್ತಡ ತರಲು ಮುಂದಾದ ಡಿಕೆ ಶಿವಕುಮಾರ್, ನಿಖಿಲ್ ಗೆಲುವಿಗೆ ರಣತಂತ್ರ ಆರಂಭಿಸಿದ್ದಾರೆ.