ಡಾ ಸಿಎನ್ ಮಂಜುನಾಥ್ ಪ್ರಕಾರ ಈ ಮೂರು ಮಾನಸಿಕ ಖಾಯಿಲೆ ಬಗ್ಗೆ ಎಚ್ಚರವಿರಬೇಕು

Krishnaveni K

ಬುಧವಾರ, 13 ಆಗಸ್ಟ್ 2025 (11:23 IST)
ದೈಹಿಕ ಖಾಯಿಲೆಯಷ್ಟೇ ಮಾನಸಿಕ ಖಾಯಿಲೆ ಅಪಾಯಕಾರಿ. ನಮ್ಮೊಳಗಿರುವ ಮೂರು ಮಾನಸಿಕ ಖಾಯಿಲೆಗಳು ಯಾವುವು ಎಂದು ಸಂವಾದ ಕಾರ್ಯಕ್ರಮವೊಂದರಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಒಮ್ಮೆ ಹೀಗೆ ಹೇಳಿದ್ದರು.

ಒಬ್ಬ ಭಯೋತ್ಪಾದಕ 10 ಜನರನ್ನು ಸಾಯಿಸಬಹುದು. ಆದರೆ ನಕಾರಾತ್ಮಕ ಮನಸ್ಸುಳ್ಳವರು ಇಡೀ ಸಮುದಾಯವನ್ನೇ ಸಾಯಿಸುತ್ತಾನೆ, ಇಡೀ ಸಮಾಜವನ್ನೇ ಸಾಯಿಸುತ್ತಾನೆ. ಹೀಗಾಗಿ ನಕರಾತ್ಮಕ ಮನಸ್ಥಿತಿಯಿರುವವರು ನಿಜವಾದ ಭಯೋತ್ಪಾದಕರು.

ಈವತ್ತು ಮೂರು ರೀತಿಯ ಮಾನಸಿಕ ಖಾಯಿಲೆಗಳಿವೆ. ಎಲ್ಲಾ ಯಶಸ್ವೀ ವ್ಯಕ್ತಿಗಳಿಗೆ ಬೇಕಾದ ಮುಖ್ಯ ಗುಣ ಎಂದರೆ ನಗು. ಈಗಿನ ಕಾಲದಲ್ಲಿ ಮನುಷ್ಯ ತನ್ನ ಮದುವೆಯಲ್ಲೂ ನಗಲ್ಲ. ನಗು ಎನ್ನುವುದು ವಿಶ್ವ ಭಾಷೆ. ಯಾವತ್ತೂ ನಾವು ಬೇರೆಯವರ ದೌರ್ಬಲ್ಯದ ಮೇಲೆ ಯಶಸ್ಸು ಗಳಿಸಬಾರದು.

ಯಾವಾಗಲೂ ಹಂಚಿ ತಿನ್ನಬೇಕು. ಉಳಿಸಿದ್ದು ಕೊಡಬೇಕು ಹೊರತು ಹಳಸಿದ್ದು ಕೊಡಬಾರದು. ಯಾವುದೇ ವಿಚಾರವನ್ನು ಸಕಾರಾತ್ಮಕವಾಗಿ ನೋಡಬೇಕು. ಯಾವತ್ತೂ ನಮ್ಮ ಮನಸ್ಸು ಹೃದಯವನ್ನು ನಿಯಂತ್ರಿಸಬಾರದು. ಆದರೆ ಹೃದಯ ಮನಸ್ಸನ್ನು ನಿಯಂತ್ರಿಸಬೇಕು. ಮನುಷ್ಯನ ಮೂರು ಬಹುದೊಡ್ಡ ಮಾನಸಿಕ ಖಾಯಿಲೆ ಎಂದರೆ ಅಹಂಕಾರ, ಅವಮಾನ ಮಾಡುವುದು ಮತ್ತು ಅಸೂಯೆ ಪಡುವುದು. ಇದು ಮೂರೂ ಮನುಷ್ಯನ ಮಾನಸಿಕ ಸ್ವಾಸ್ಥ್ಯ ಹಾಳು ಮಾಡುತ್ತದೆ ಮತ್ತು ಅವನ ಆರೋಗ್ಯವನ್ನೂ ಹಾಳು ಮಾಡುತ್ತದೆ. ಹೀಗಾಗಿ ಈ ಮೂರು ಮಾನಸಿಕ ಖಾಯಿಲೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಅವರು ಸಂವಾದವೊಂದರಲ್ಲಿ ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ