ಡಿಕೆಶಿ ಹಸ್ತಕ್ಷೇಪ ಮಾಡಲು ಬಿಡಲ್ಲ ಎಂದ ಜಾರಕಿಹೊಳಿ!

ಬುಧವಾರ, 5 ಸೆಪ್ಟಂಬರ್ 2018 (16:06 IST)
ನಮ್ಮ ಸಮಸ್ಯೆ ಇದ್ದಾಗ ನಾವು ಕರೆದರೆ ಬರಲಿ. ಅವರಾಗಿ ಹಸ್ತಕ್ಷೇಪ ಮಾಡಲು ನಾವು ಬಿಡಲ್ಲ. ಡಿಕೆಶಿ ಇರಲಿ ಯಾರೇ ಇರಲಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲು ಬಿಡಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದು, ಸಚಿವ ಡಿ.ಕೆ.ಶಿವಕುಮಾರ ಬೆಳಗಾವಿಯಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು. ನಾನು ಬೆಂಗಳೂರಿನಲ್ಲಿ ಹಸ್ತಕ್ಷೇಪ ಮಾಡೋದು ತಪ್ಪು. ಡಿಕೆಶಿ ಇರಲಿ ರಮೇಶ ಜಾರಕಿಹೊಳಿ ಇರಲಿ ನಮ್ಮ ಜಿಲ್ಲೆ ನಾವ್ ನೋಡ್ಕೋಬೇಕು. ನಮ್ಮ ಸಮಸ್ಯೆ ಇದ್ದಾಗ ನಾವು ಕರೆದರೆ ಬರಲಿ ಅವರಾಗಿ ಹಸ್ತಕ್ಷೇಪ ಮಾಡಲು ನಾವು ಬಿಡಲ್ಲ ಎಂದು ನೇರವಾಗಿ ಟಾಂಗ್ ನೀಡಿದ್ದಾರೆ.

ಡಿಕೆಶಿ ಇರಲಿ ಯಾರೇ ಇರಲಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಲು ಬಿಡಲ್ಲ ಎಂದಿರುವ ಅವರು,
ಬೆಳಗಾವಿ ಕಾಂಗ್ರೆಸ್ ನಲ್ಲಿ ಭಿನ್ನಮತ ವಿಚಾರವನ್ನು ಈಗಾಗಲೇ ನಾವು ಚರ್ಚೆ ಮಾಡಿದ್ದೀವಿ. ದಯವಿಟ್ಟು ಅದನ್ನು ಮುಂದುವರೆಸಬೇಡಿ ಎಂದರು.

ರಾಜಕಾರಣದಲ್ಲಿ ವಾಗ್ವಾದ ಆಗೋದು ಕಾಮನ್. ಅದನ್ನೇ ವೈರತ್ವ ಅಂದುಕೊಂಡ್ರೆ ಮುರ್ಖತನ.
ಸತೀಶ್ ಜಾರಕಿಹೊಳಿ ಮೃದುವಾಗಿ ಹೇಳ್ತಾರೆ ನಾನು ಸಿಟ್ಟಿನಿಂದ ಹೇಳ್ತಿನಿ ಇದು ಅವರವರ ಸ್ವಭಾವ. ಅದನ್ನೆ ಮಾಧ್ಯಮದವರು ಊಹೆ ಮಾಡಿ ಬರೆದ್ರೆ ಅದು ತಪ್ಪು ಎಂದರು.

ಪಿ.ಎಲ್.ಡಿ ಬ್ಯಾಂಕ್ ಬಗ್ಗೆ ನನಗೆ ಗೊತ್ತಿಲ್ಲ. ಮೂರ್ನಾಲ್ಕು ಜನ ಶಾಸಕರಿದ್ದಾರೆ ಸಮಸ್ಯೆ ಪರಿಹಾರ ಮಾಡ್ಕೋತಾರೆ.
ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಚರ್ಚಿಸಲು ಆಕೆಗೆ ಅದು ಸಂಬಂಧವಿಲ್ಲ. ಹೆಬ್ಬಾಳಕರ್ ನನ್ನ ಜೊತೆ ಮಾತಾಡಿಲ್ಲ. ಸತೀಶ್ ಜಾರಕಿಹೊಳಿ ಮಾತಾಡಿದ್ದಾರೆ ಅವ್ರ ಜೊತೆ ಮಾತಾಡಿದ್ದೀನಿ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಮತವಿರಬೇಕು ಅಂದ್ರೆನೇ ಪ್ರಜಾಪ್ರಭುತ್ವ. ನಾವು ಹೇಳಿದ್ದೆ ತಲೆಯಾಡಿಸೋದಾದ್ರೆ ಹಿಟ್ಲರ್ ಶಾಹಿ ಆಗುತ್ತೆ. ಶೋ ಪೀಸ್ ಗಳ ಮಾತು ಕೇಳಿದ್ರೆ ಕಾಂಗ್ರೆಸ್ ಹಾಳಾಗುತ್ತದೆ. ಬೆಂಗಳೂರಿನಲ್ಲಿ ಹೋಗಿ ಶೋ ಮಾಡೋದಲ್ಲ ಎಂದು ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ವಿಚಾರವಾಗಿ ಮೇಲಿನಂತೆ ಪ್ರತಿಕ್ರಿಯೆಯನ್ನು   ಸಚಿವ ರಮೇಶ ಜಾರಕಿಹೊಳಿ ನೀಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ