ಅನ್ಯ ಪಕ್ಷದವರನ್ನ ಸೆಳೆಯ ಪ್ರಯತ್ನ ಒಪ್ಪಿಕೊಂಡ ಡಿಕೆಶಿ
ವಲಸಿಗರು ಹಾಗೂ ಅನ್ಯ ಪಕ್ಷದವರನ್ನು ಪಕ್ಷಕ್ಕೆ ಸೆಳೆಯುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದು,ದೇರ್ ವಿ ಬಿ ಸರ್ಫೈಸ್ಸ್ ಇರುತ್ತದೆ.ಬೇಕಾದಷ್ಟು ಸರ್ಫೈಸ್ಸ್ ಇರುತ್ತದೆ, ಕೆಲವೊಂದು ಕ್ಷೇತ್ರಗಳಲ್ಲೂ ಇರುತ್ತದೆ.ಬರೀ ವಲಸಿಗರ ಬಗ್ಗೆ ಯಾಕೆ ಯೋಚನೆ ಮಾಡ್ತಾ ಇದ್ದೀರಾ?ಬಣಕಾರ್ ,ಪಾಟೀಲ್, ಮುಧುಬಂಗಾರಪ್ಪ, ಶರತ್ ಬಚ್ಚೇಗೌಡ ವಲಸಿಗರಾ?ಮಸ್ಕಿ ಅಭ್ಯರ್ಥಿ ವಲಸಿಗರಾ.?ಮಸ್ಕಿಯಲ್ಲಿ ಹೋದ ತಕ್ಷಣ ಇನ್ನೊಬ್ಬರು ಬಂದರು.ಹೊಸ ಕೋಟೆಯಲ್ಲಿ ಹೋದರು, ಇನ್ನೊಬ್ಬರು ಬಂದ್ರು.ಒಬ್ಬರು ಖಾಲಿ ಆಗುತ್ತಿತ್ತಂದೆ ಇನ್ನೊಬ್ಬರು ರೆಡಿ ಆಗ್ತಾ ಇರ್ತಾರೆ.ಹೆಬ್ಬಾರ್ ಕ್ಷೇತ್ರದಲ್ಲಿ ವಿ.ಎಸ್ ಪಾಟೀಲ್ ಅರ್ಜಿ ಹಾಕಿದ್ದಾರೆ.ಅರ್ಜಿ ನನಗೆ ಕೊಟ್ಟು ಹೋಗಿದ್ದಾರೆ.ಹಾನಗಲ್ ನಲ್ಲಿ ಬಣಕಾರ್ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದರು.ಅವರನ್ನು ಪಾರ್ಟಿ ಸೇರಿಸಿಕೊಂಡಿದ್ದೇವೆ.ಜೆಡಿಎಸ್ ನಿಂದ 15 ಜನ ಸೋಲು ಕಂಡವರು ಅರ್ಜಿ ಹಾಕಿದ್ದಾರೆ.ರಾಜಕೀಯ ನಿಂತ ನೀರಲ್ಲ,ಏನು ಬೇಕಾದರೂ ಆಗಬಹುದು ಚುನಾವಣಾ ಹೊತ್ತಿನಲ್ಲಿ ಅನ್ಯ ಪಕ್ಷದವರನ್ನ ಸೆಳೆಯ ಪ್ರಯತ್ನ ಡಿಕೆಶಿ ಒಪ್ಪಿಕೊಂಡಿದ್ದಾರೆ.