ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಮಲ್ಲಿಕಾರ್ಜುನ್ ಖರ್ಗೆ ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರೆ ನಾನು ಹೊಸ ವರ್ಷದ ಶುಭಾಶಯ ಕೋರಲು ಬಂದಿದ್ದೇನೆ. ನಾವೆಲ್ಲ ಒಟ್ಟಿಗೆ ದುಡಿದು ನಾವು ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ ಜನ ಬದಲಾವಣೆ ಬಯಸುತ್ತಿದ್ದಾರೆ. ಅದರಂತೆ ನಾವು ಕಾಂಗ್ರೆಸ್ ಪಕ್ಷ ವನ್ನ ಅಧಿಕಾರಕ್ಕೆ ಬರುತ್ತೆ. ಇನ್ನೂ ಅಭ್ಯರ್ಥಿಗಳ ಲಿಸ್ಟ್ ಕಳಿಸಲು ಗಡುವು ಕೊಟ್ಟಿದೇವು. ಇನ್ನು ಮೂರು ನಾಲ್ಕು ಜಿಲ್ಲೆಗಳಲ್ಲಿ ಮೀಟಿಂಗ್ ಆಗಿಲ್ಲ. 31 ರ ವರೆಗೆ ಲಿಸ್ಟ್ ಕಳಿಸಲು ಗಡುವು ಕೊಟ್ಟಿತ್ತು. ಇನ್ನು ಮೂರು ದಿನಗಳಲ್ಲಿ ಅವರು ಲಿಸ್ಟ್ ಕಳಿಸುತ್ತಾರೆ.ನಂತರ ಚುನಾವಣಾ ಸಮಿತಿ ಸಭೆ ನಡೆಯುತ್ತೆ. ಖರ್ಗೆ ಅವರು ಜೊತೆ ಮಾತನಾಡಿರುವ ವಿಚಾರಗಳನ್ನು ಡಿಸ್ ಕ್ಲೋಸ್ ಮಾಡೋಕೆ ಆಗೋದಿಲ್ಲ. ಸಂಕ್ರಾಂತಿ ಒಳಗಡೆ ಮೊದಲ ಪಟ್ಟಿ ಬಿಡುಗಡೆ ಆಗುವ ಸಾದ್ಯತೆ ಇದೆ ಎಂದು ಹೇಳಿದರು.