ಪದ್ಮನಾಭನಗರದಲ್ಲಿ ಕೈ ಅಭ್ಯರ್ಥಿ ಬದಲಾವಣೆಗೆ ಡಿಕೆಶಿ ಸರ್ಕಸ್
ಡಿಕೆ ಸುರೇಶ್ ನಿಲ್ತಾರೆ ಅಂದ್ರೆ ನಾನೇ ಕ್ಷೇತ್ರ ಬಿಟ್ಟುಕೊಡ್ತೇನೆ ಎಂದು ಪದ್ಮನಾಭ ನಗರದ ಟಿಕೇಟ್ ಘೋಷಿತ ಅಭ್ಯರ್ಥಿ ಹೇಳಿದ್ದಾರೆ.ಬಿಜೆಪಿ ಸಚಿವ ಆರ್ ಅಶೋಕ್ ಅವರಿಗೆ ಎರಡು ಕ್ಷೇತ್ರದ ಹೊಣೆ ಕೊಟ್ಟಿದ್ದಾರೆ.ಒಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಸ್ವಕ್ಷೇತ್ರ ಕನಕಪುರದಲ್ಲಿ ಸ್ಫರ್ದೆ ಇತ್ತ ಪದ್ಮನಾಭನಗರದಲ್ಲಿಯೂ ಸ್ಪರ್ಧೆಮಾಡಲಿದ್ದಾರೆ.ಈ ಹಿನ್ನೆಲೆ ಬಿಜೆಪಿ ಗೆ ಟಕ್ಕರ ಕೊಡಲು ಆರ್ ಅಶೋಕ್ ವಿರುದ್ಧ ಪದ್ಮನಾಭ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಬದಲಾವಣೆ ಮಾಡಲು ಡಿಕೆಶಿವಕುಮಾರ್ ಮುಂದಾಗಿದ್ದಾರೆ.ಇಂದು ಟಿಕೇಟ್ ಘೋಷಿಸಿತ ರಾದ ರಘಿನಾಥ್ ನಾಯ್ಡು ಜೊತೆ ಚರ್ಚೆ ನಡೆಸಿದ್ದು,ಈ ವೇಳೆ ಡಿಕೆ ಶಿವಕುಮಾರ್ ನಾಯ್ಡು ಅವರಿಗೂ ಸ್ಫರ್ಧೆ ಮಾಡಲು ಸಲಹೆ ಕೊಟ್ಟಿದ್ದಾರೆ ಎಂದು ಸ್ವತಃ ರಘುನಾಥ್ ನಾಯ್ಡು ಅವರೇ ತಿಳಿಸಿದ್ದಾರೆ.ಆದರೆ ಇಂದು ನಾಯ್ಡು ಅವರಿಗೆ ಬಿ ಫಾರಂ ನೀಡದಿರುವುದು ಕೂತಹಲಕ್ಕೆ ಕಾರಣವಾಗಿದೆ.