ಪೋಲೀಸ್ ಠಾಣೆ ಮುಂಭಾಗ ಬೆಂಕಿ ವಾಹನಗಳು‌ ಬೆಂಕಿಗಾಹುತಿ

ಗುರುವಾರ, 13 ಏಪ್ರಿಲ್ 2023 (20:11 IST)
ಅವೆಲ್ಲ ವಿವಿಧ ಪ್ರಕರಣಗಳಲ್ಲಿ ಸೀಜ್ ಮಾಡಿ‌ ಠಾಣೆ ಮುಂಭಾಗ ನಿಲ್ಲಿಸಲಾಗಿದ್ದ ವಾಹನಗಳು .. ಧಿಡೀರ್ ಬೆಂಕಿ‌ ಕಾಣಿಸಿಕೊಂಡ ಹಿನ್ನಲೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಕೊಂಡು ಇದೀಗ ಸುಟ್ಟು ಕರಕಲಾಗಿವೆ ...ಕೆಲಕಾಲ  ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವಂತಹ ಕಾರು ಹಾಗೂ ಬೈಕ್ಗಳು ಮತ್ತೊಂದೆಡೆ ಬೆಂಕಿಯನ್ನು ನಿಂದಿಸಲು ಅರಸಾಹಸ ಪಡುತ್ತಿರುವಂತಹ ಅಗ್ನಿಶಾಮಕ ಸಿಬ್ಬಂದಿ ಈ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿಯಲ್ಲಿ.  ಹೌದು ಅವಲಹಳ್ಳಿ ಪೊಲೀಸ್ ಠಾಣೆ ಯಲ್ಲಿ ವಿವಿಧ ಪ್ರಕರಣಗಳಲ್ಲಿ ಸೀಸ್ ಆಗಿದ್ದ ನೂರಾರು ಬೈಕ್ ಗಳು ಹಾಗು ಕಾರುಗಳು ಇಂದು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ ... ಇದರಿಂದಾಗಿ ಲಕ್ಷಾಂತರ ರೂಗಳಷ್ಟು ನಷ್ಟವಾಗಿದೆ ‌ಎನ್ನಲಾಗುತ್ತಿದೆ . ಬೆಂಕಿ ಒತ್ತಿಕೊಳ್ಳಲು ನಿಖರವಾದ ಕಾರಣ ಇನ್ನು ಸಹ ತಿಳಿದುಬಂದಿಲ್ಲ.

ಬೆಂಕಿಯಲ್ಲಿ ಸುಮಾರು 45 ದಿಚಕ್ರ ವಾಹನಗಳು 8 ಆಟೋಗಳು ಎಂಟು ಕಾರುಗಳು ಸಂಪೂರ್ಣವಾಗಿ ಸುಟ್ಟು ಹೋಗಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದಲ್ಲೆ ಇದ್ದ ವಾಹನಗಳಿಗೆ ತಾಕಿ ಈ ಅನಾಹುತ ಸಂಭವಿಸಿದೆ ..ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬ ತನಿಖೆಗೆ ಆದೇಶಿಸಲಾಗಿದೆ.ಒಟ್ಟಿನಲ್ಲಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಇಂತಹ ಅನಾಹುತ ಸಂಭವಿಸಿದ್ದು ಲಕ್ಷಾಂತರ ರೂಗಳ ಬೆಲೆಬಾಳು ವಾಹನಗಳ ಕಳೆದುಕೊಂಡ ಜನಸಾಮಾನ್ಯರ ಪಾಡು ನಿಜಕ್ಕೂ ಶೋಚನೀಯ ಈ ಬಗ್ಗೆ ತನಿಖೆ ನಡೆಸಿ ಪೊಲೀಸರು ವಾಹನ ಮಾಲೀಕರಿಗೆ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡುತ್ತಾರ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ