ವಿದೇಶದಿಂದ ಬಂದಿದ್ದರೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ; ಇಲ್ಲಾಂದ್ರೆ ಬೀಳುತ್ತೆ ಕೇಸ್
ಎಲ್ಲೆಡೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕೆಲಸಕ್ಕೆಂದು ಹೊರದೇಶಕ್ಕೆ ಹೋಗಿ ಕಳೆದ ಒಂದು ತಿಂಗಳಿನಿಂದ ಇಂದಿನವರೆಗೂ ಜಿಲ್ಲೆಗೆ ವಾಪಸ್ಸಾದ ನಾಗರಿಕರು ಕೊರೊನಾ ಪರೀಕ್ಷೆಗೆ ಕಡ್ಡಾಯವಾಗಿ ಒಳಗಾಗಬೇಕು. ಹೀಗಂತ ಡಿಸಿ ಖಡಕ್ ಸೂಚನೆ ಕೊಟ್ಟಿದ್ದಾರೆ.
ಕೊರೋನಾ ವೈರಸ್ ಸೊಂಕು ಹೆಚ್ಚಾಗಿ ಹೊರದೇಶದಿಂದ ಬಂದವರಿಂದಲೆ ಕಂಡುಬರುತ್ತಿರುವುದರಿಂದ ಹೊರದೇಶದಿಂದ ಬಂದವರು ಮನೆಯಲ್ಲಿ ಗೌಪ್ಯವಾಗಿರಬಾರದು. ಕೂಡಲೆ ತಮ್ಮ ಪ್ರವಾಸದ ಇತಿಹಾಸದೊಂದಿಗೆ ಆಸ್ಪತ್ರೆಗೆ ತೆರಳಿ ತಪಾಸಣೆಗೊಳಪಡುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದಿದ್ದಾರೆ.
ಇಲ್ಲದಿದಲ್ಲಿ ಸರ್ಕಾರದಿಂದಲೇ ಹೊರದೇಶದಿಂದ ಮರಳಿದವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಡಿ.ಸಿ ಶರತ್ ಬಿ. ಅವರು ಎಚ್ಚರಿಕೆ ನೀಡಿದ್ದಾರೆ.