ಕೊರೊನಾ ಎಫೆಕ್ಟ್ ; ರೈಲ್ವೆ ಇಲಾಖೆಗೆ 500 ಕೋಟಿ ನಷ್ಟ?

ಗುರುವಾರ, 19 ಮಾರ್ಚ್ 2020 (15:52 IST)
ಕೊರೊನಾ ವೈರಸ್ ನಿಂದಾಗಿ ಜಾಗತಿಕ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಗಂಭೀರವಾಗಿ ಬೀರಲಾರಂಭಿಸಿದೆ.

ಭಾರತದಲ್ಲಿ ಕೊರೊನಾ ವೈರಸ್ ಜನಸಾಮಾನ್ಯರನ್ನು ತತ್ತರಗೊಳ್ಳುವಂತೆ ಮಾಡಿದೆ. ಕಳೆದೊಂದು ವಾರದಲ್ಲಿ 185 ರೈಲ್ವೆ ಸಂಚಾರ ಸ್ಥಗಿತಗೊಂಡಿದ್ದು, ಇದರಿಂದ ಬರೋಬ್ಬರಿ ಅಂದಾಜು 500 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗ್ತಿದೆ.

ಸಾರ್ವಜನಿಕ ಸಾರಿಗೆಯಾಗಿರುವ ರೇಲಿನಲ್ಲಿ ಕೊರೊನಾ ಭೀತಿ ಹೆಚ್ಚಾಗಿ ಜನರನ್ನು ಕಾಡುತ್ತಿದೆ. ವೈರಸ್ ನಿಂದಾಗಿ ಹೆದರಿ ರಿಸರ್ಜವೇಷನ್ ಮಾಡಿಸುತ್ತಿಲ್ಲ. ಬಹುತೇಕ ಪ್ರಯಾಣಿಕರು ತಮ್ಮ ಪ್ರಯಾಣದ ಟಿಕೆಟ್ ಗಳನ್ನು ರದ್ದುಗೊಳಿಸಿಕೊಳ್ಳುತ್ತಿದ್ದಾರೆ.

ಬಹುತೇಕ ರೈಲುಗಳಲ್ಲಿ ಪ್ರಯಾಣಿಕರ ಬರ ಕಂಡು ಬರುತ್ತಿದೆ. ಹೀಗಾಗಿ ರೈಲ್ವೆ ಇಲಾಖೆ ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತಿದೆ ಅಂತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ