ಪೊಲೀಸ್ ಠಾಣೆಗೆ ಹಾಜರಾಗಲ್ಲ, ಬೇಕಿದ್ರೆ ನೀವೇ ಮನೆಗೆ ಬನ್ನಿ: ಎಸಿಪಿಗೆ ಬಿಎಸ್‌ವೈ ಪತ್ರ

ಗುರುವಾರ, 28 ಸೆಪ್ಟಂಬರ್ 2017 (11:34 IST)
ವಿಧಾನಪರಿಷತ್ ಸದಸ್ಯ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಹಾಜರಾಗಲು ಸಾಧ್ಯವಿಲ್ಲ. ವಿಚಾರಣೆ ಮಾಡಬೇಕಾದ್ರೆ ನಮ್ಮ ಮನೆಗೆ ಬನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ವಿನಯ್ ಪ್ರಕರಣದಲ್ಲಿ ವಿಚಾರಣೆಗಾಗಿ ಇಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಹಾಜರಾಗಬೇಕಿದ್ದ ಯಡಿಯೂರಪ್ಪ, ಇದೀಗ ತಾವು ಖುದ್ದು ಹಾಜರಾಗಲು ಸಾಧ್ಯವಿಲ್ಲ. ನನ್ನ ಪರ ವಕೀಲರು ನಿಮ್ಮ ಮುಂದೆ ಹಾಜರಾಗಲಿದ್ದಾರೆ ಎಂದು ಎಸಿಪಿ ಬಡಿಗೇರ್‌ಗೆ ತಿಳಿಸಿದ್ದಾರೆ. 
 
ನನಗೆ 65 ವರ್ಷವಾಗಿದ್ದರಿಂದ ಭದ್ರತೆಯ ಕಾರಣಗಳಿಂದಾಗಿ ಪೊಲೀಸ್ ಠಾಣೆಗೆ ಹಾಜರಾಗಲು ಸಾಧ್ಯವಿಲ್ಲ. ಯಾವುದೇ ದಾಖಲೆಗಳು ಬೇಕಾದಲ್ಲಿ ನೀಡಲು ಸಿದ್ದ  ಎಂದು ಹೇಳಿದ್ದಾರೆ.
 
ವಿನಯ್ ಮೇಲೆ ಹಲ್ಲೆ, ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂ 91ರ ಅಡಿಯಲ್ಲಿ ಯಡಿಯೂರಪ್ಪಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ನೋಟಿಸ್‌ಗೆ ಉಲ್ಟಾ ಹೊಡೆದಿರುವ ಯಡಿಯೂರಪ್ಪ ಪೊಲೀಸ್ ಠಾಣೆಗೆ ಹಾಜರಾಗುವುದಿಲ್ಲ. ವಿಚಾರಣೆ ಮಾಡುವುದಾದ್ರೆ ನಮ್ಮ ಮನೆಗೆ ಬನ್ನಿ ಎಂದು ಮಲ್ಲೇಶ್ವರಂ ಪೊಲೀಸ್ ಠಾಣೆಯ ಎಸಿಪಿ ಬಡಿಗೇರ್ ಅವರಿಗೆ ಪತ್ರ ಬರೆದಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ