ವರುಣ್ ಗಾಂಧಿಯಲ್ಲಿ ನೆಹರು ಸಿದ್ಧಾಂತಗಳಿವೆ, ಬಿಜೆಪಿಗೆ ಅನರ್ಹ: ದಿಗ್ವಿಜಯ್ ಸಿಂಗ್

ಬುಧವಾರ, 27 ಸೆಪ್ಟಂಬರ್ 2017 (18:39 IST)
ರೋಹಿಂಗ್ಯ ಮುಸ್ಲಿಮರ ಬಗ್ಗೆ ನಿಲುವು ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಸಂಸದ ವರುಣ್ ಗಾಂಧಿಯನ್ನು ಬೆಂಬಲಿಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಮರನ್ನು ಬೆಂಬಲಿಸುವ ಮೂಲಕ ವರುಣ್ ಗಾಂಧಿ ನೆಹರೂ-ಗಾಂಧಿ ಪರಂಪರೆ ಮತ್ತು ಕಲ್ಪನೆಯನ್ನು ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ವರುಣ್ ಬಿಜೆಪಿಯಲ್ಲಿರಲು ಅನರ್ಹರು ಎಂದು ಟ್ವೀಟ್ ಮಾಡಿದ್ದಾರೆ.
 
ವರುಣ್ ಗಾಂಧಿ ರೋಹಿಂಗ್ಯ ಮುಸ್ಲಿಮರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಇವೆಲ್ಲಾ ಉಹಾಪೋಹದ ವರದಿಗಳು ಎಂದು ಬಿಜೆಪಿ ವಿವಾದವನ್ನು ತಣ್ಣಗಾಗಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. 
 
ಮಂಗಳವಾರ, ಭಾರತದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾ ಮುಸ್ಲಿಂ ನಿರಾಶ್ರಿತರಿಗೆ ಆಶ್ರಯವನ್ನು ಒದಗಿಸಿ ಅವರ ದೇಶಕ್ಕೆ  ಗಡೀಪಾರು ಮಾಡುವುದು ಸರಿಯಲ್ಲ. ಭಾರತದ ಶ್ರೀಮಂತ ಇತಿಹಾಸದಲ್ಲಿ ಅನೇಕ ನಿರಾಶ್ರಿತರಿಗೆ ಆಶ್ರಯ ನೀಡಿದ ಘಟನೆಗಳಿವೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
 
ವರುಣ್ ಗಾಂಧಿ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿದ ಗೃಹ ಸಚಿವಾಲಯದ ರಾಜ್ಯ ಸಚಿವ ಹಂಸರಾಜ್ ಆಹಿರ್, ರಾಷ್ಟ್ರದ ಹಿತಾಸಕ್ತಿಗೆ ಮೊದಲು ಆದ್ಯತೆ ನೀಡಬೇಕು ಎಂದು ವರುಣ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.  
 
ಹಿಂಸಾಚಾರದ ಹಿನ್ನೆಲೆಯಲ್ಲಿ ಮಯನ್ಮಾರ್‌ನಿಂದ ಪಲಾಯನ ಮಾಡಿದ ಬಳಿಕ ಸುಮಾರು 40,000 ರೋಹಿಂಗ್ಯಾ ಮುಸ್ಲಿಮರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಸೆಪ್ಟಂಬರ್ 21 ರಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್, ರೋಹಿಂಗ್ಯೆ ಮುಸ್ಲಿಮರು 'ಕಾನೂನುಬಾಹಿರ ವಲಸಿಗರು. ದೇಶದಲ್ಲಿ ಆಶ್ರಯ ಪಡೆದುಕೊಂಡ ನಿರಾಶ್ರಿತರಂತೆ ಅರ್ಹತೆ ಹೊಂದಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ