ಕಬ್ಬು ಕಟಾವು ಮಾಡುತ್ತಿದ್ದಾಗ ಚಿರತೆ ಏನ್ಮಾಡ್ತು ಗೊತ್ತಾ?

ಶನಿವಾರ, 23 ಫೆಬ್ರವರಿ 2019 (12:43 IST)
ಆತ ತನ್ನ ಜಮೀನಿನಲ್ಲಿ ಕಬ್ಬು ಕಟಾವಿನಲ್ಲಿ ತೊಡಗಿಕೊಂಡಿದ್ದ. ಆದರೆ ಎದುರಲ್ಲೇ ಚಿರತೆ ಇತ್ತು. ದಿಕ್ಕಾಪಾಲಾಗಿ ಓಡುವ ಸ್ಥಿತಿಯಲ್ಲಿಯೂ ಆತ ಇರಲಿಲ್ಲ. ಮುಂದೇನಾಯ್ತು?

ಕಬ್ಬು ಕಟಾವು ಮಾಡುತ್ತಿದ್ದ ಕಾರ್ಮಿಕರ ಮೇಲೆ ಚಿರತೆ ದಾಳಿ ನಡೆದಿದೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲ್ಲೂಕಿನ ಚಿಕ್ಕೋಸಹಳ್ಳಿ ಬಳಿ ಘಟನೆ ನಡೆದಿದೆ. ಕಬ್ಬು ಕಟಾವು ಮಾಡುತ್ತಿದ್ದ ಕಾರ್ಮಿಕರ ಮೇಲೆ ಚಿರತೆ ದಾಳಿ ಮಾಡಿದೆ. ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಕಬ್ಬು ಕಟಾವು ಮಾಡುತ್ತಿದ್ದ ಸುರೇಶ್ ಮತ್ತು ದಿನೇಶ್ ಗಾಯಗೊಂಡ ಕಾರ್ಮಿಕರಾಗಿದ್ದಾರೆ.

ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕಿನ ಚಿಕ್ಕೋಸಹಳ್ಳಿ ಗ್ರಾಮ‌ ರೈತ ರಾಮೇಗೌಡರ ಜಮೀನಿನ ಕಬ್ಬು ಕಟಾವು ಮಾಡುತ್ತಿದ್ದಾಗ  ಘಟನೆ ನಡೆದಿದೆ.

ಕೆಆರ್ ಪೇಟೆ ಪಟ್ಟಣದ  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ