ಭಾರತದ ಸೇನೆಯ ಮೇಲೆ ಮತ್ತೆ ಭೀಕರ ದಾಳಿಗೆ ಸಂಚು ರೂಪಿಸಿದ ಉಗ್ರರು

ಗುರುವಾರ, 21 ಫೆಬ್ರವರಿ 2019 (12:30 IST)
ಜಮ್ಮು ಕಾಶ್ಮೀರ : 44 ಮಂದಿ ಭಾರತೀಯ ಯೋಧರನ್ನ ಬಲಿ ಪಡೆದ ಪುಲ್ವಾಮಾ ದಾಳಿ ಜಸ್ಟ್ ಟ್ರೇಲರ್ ಆಗಿದ್ದು, ಭಾರತದ ಸೇನೆಯ ಮೇಲೆ ಮತ್ತೆ ಭೀಕರ ದಾಳಿಗೆ ಜೈಶ್ ಇ ಮೊಹಮ್ಮದ್ ಸಂಚು ರೂಪಿಸಿರುವ ಮಾಹಿತಿಯೊಂದು ಇದೀಗ ಗುಪ್ತಚರ ಇಲಾಖೆಯಿಂದ ತಿಳಿದುಬಂದಿದೆ.

ಡಿಸೆಂಬರ್‍ನಲ್ಲೇ ಜಮ್ಮು-ಕಾಶ್ಮೀರಕ್ಕೆ ನುಸುಳಿರುವ ಜೈಶ್ ಇ ಮೊಹಮ್ಮದ್‍ ನ 21 ಮಂದಿ ಉಗ್ರರು, ಒಂದು ದಾಳಿ ಕಾಶ್ಮೀರದಲ್ಲಿ ಹಾಗೂ ಉಳಿದೆರಡು ದಾಳಿಯನ್ನು ಭಾರತದ ಬೇರೆ ಕಡೆಗಳಲ್ಲಿ ಎಸಗಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.


 

ಪಾಕಿಸ್ತಾನದಲ್ಲಿರುವ ಜೆಇಎಂ ನಾಯಕರು ಮತ್ತು ಕಾಶ್ಮೀರದಲ್ಲಿರುವ ಉಗ್ರರ ನಡುವೆ ಫೆಬ್ರವರಿ 16 ಮತ್ತು 17ರಂದು ನಡೆದ ಸಂಭಾಷಣೆಯನ್ನು ಕದ್ದಾಲಿಕೆ ಮಾಡಿದಾಗ ಈ ಅಂಶ ತಿಳಿದುಬಂದಿದೆ ಎಂದು ಗುಪ್ತಚರ ವಿಭಾಗದ ಮೂಲಗಳು ತಿಳಿಸಿರುವುದು ವರದಿಯಾಗಿದೆ. ಅಲ್ಲದೇ ಜೆಇಎಂ ಪುಲ್ವಾನಾ ದಾಳಿಯ ಸಿದ್ಧತೆಯ ವೀಡಿಯೊವನ್ನು ಕೂಡಾ ಇಷ್ಟರಲ್ಲೇ ಬಿಡುಗಡೆ ಮಾಡಲಿದೆ ಎಂದು ಭದ್ರತಾ ಪಡೆ ಮೂಲಗಳು ಹೇಳಿವೆ.


 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

                                                                                                      

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ