ದೇಶಾದ್ಯಂತ ಪ್ರವಾಹಗಳಿಗೆ ಈ ವರ್ಷ ಬಲಿಯಾದವರೆಷ್ಟು ಗೊತ್ತಾ?

ಸೋಮವಾರ, 27 ಆಗಸ್ಟ್ 2018 (20:40 IST)
ಕೇರಳ, ಕೊಡಗು ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಈ ವರ್ಷ ಮಳೆ ತನ್ನ ರೌದ್ರತೆಯನ್ನು ತೋರಿದೆ. ಹೀಗಾಗಿ ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚು ಜನರು, ಜಾನುವಾರುಗಳು ಮಳೆಗೆ ಜೀವ ಕಳೆದುಕೊಳ್ಳುವಂತಾಗಿದೆ.

ನಿರಂತರವಾಗಿ ಸುರಿದ ಮಳೆ ಈ ವರ್ಷದಲ್ಲಿ ಜನರ ಜೀವನವನ್ನು ಆರ್ಥಿಕ ಸಂಕಷ್ಟಕ್ಕೆ ಒಂದೆಡೆ ನೂಕಿದೆ. ಇನ್ನೊಂದೆಡೆ ಸಾವಿರಾರು ಕೋಟಿ ರೂ. ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾಗಿದೆ.

ಏತನ್ಮಧ್ಯೆ ದೇಶದಲ್ಲಿ ಇದುವರೆಗೆ 75 ಲಕ್ಷ ಜನರಿಗೆ ನೆರೆ, ಪ್ರವಾಹದ ಬಿಸಿ ಜೋರಾಗಿಯೇ ತಟ್ಟಿದೆ. ವಿವಿಧ ಪ್ರದೇಶಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿರುವ ವರದಿಗಳು ಬಂದಿವೆ. ಐವತ್ತಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೇರಳಗಳಲ್ಲಿ ಹೆಚ್ಚು ಜನರು ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ