ಪ್ರವಾಹ ಪೀಡಿತರಿಗೆ ಮಕ್ಕಳು ನೀಡಿದರು ಹೂಡಿಟ್ಟ ಹಣ...

ಸೋಮವಾರ, 27 ಆಗಸ್ಟ್ 2018 (18:20 IST)
ಕೊಡಗಿನಲ್ಲಿ ಪ್ರಕೃತಿ ವಿಕೋಪ, ಪ್ರವಾಹ ಹಿನ್ನಲೆಯಲ್ಲಿ ಸಾವಿರಾರು ಜನ ನಿರಾಶ್ರಿತರಾಗಿದ್ದು, ರಾಜ್ಯ ವಿವಿಧ ಸಂಘ, ಸಂಸ್ಥೆಗಳು ವಯಕ್ತಿಕ ಸಹಾಯ ಮಾಡುತ್ತಿವೆ. ಪುಟಾಣಿ ಮಕ್ಕಳೂ ಸಹ ತಾವು ಕೂಡಿಟ್ಟ ಹುಂಡಿ ಹಣವನ್ನು ಪ್ರವಾಹ ಪೀಡಿತರಿಗೆ ನೀಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೆಗುಣಸಿ ಗ್ರಾಮದ ಪುಟ್ಟ ಮಕ್ಕಳು, ತಾವು ಕೂಡಿಟ್ಟ ಹುಂಡಿ ಹಣವನ್ನು ಪ್ರವಾಹ ಪೀಡಿತರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ವಿನೇತಾ (4) ಹಾಗೂ ವಿರೂಪಾಕ್ಷ (3) ಇಬ್ಬರು ಕೂಡಿ ಇಟ್ಟ 4055  ರೂ. ಗಳನ್ನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಪುಟ್ಟ ಮಕ್ಕಳ ದೇಣಿಗೆಯನ್ನು ಕಂಡ ನಾಗರಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಒಟ್ಟು ಶೇಗುಣಸಿ ಗ್ರಾಮದಿಂದ ಸಂಗ್ರಹಿಸಿದ್ದ ಹಣ, ಆಹಾರ ಬಟ್ಟೆ, ಧಾನ್ಯಗಳನ್ನು ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಕೊಡಗಿನ ನೆರೆ ಸಂತ್ರಸ್ತರಿಗೆ ತಲುಪಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ