ವಿಘ್ನ ವಿನಾಯಕ, ಲಂಬೋದರ, ಗಣಪತಿ ಹಬ್ಬದ ಸಂಭ್ರದ ಇನ್ನೂ ಜನರ ಮನದಿಂದ ಮರೆಯಾಗಿಲ್ಲ. ಅಂಥದ್ದರಲ್ಲಿ ಶಾಸ್ತ್ರ ಪ್ರಕಾರ ನೀರಿನಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು. ಆದರೆ ಅವರು ಮಾಡಿದ್ದೇ ಬೇರೆ…
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆಯನ್ನು ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ಮುದ್ನಾಳ್ ಕ್ರಾಸ್ ಹತ್ತಿರದ ಕಾಲುವೆಯಲ್ಲಿ ಮೂರ್ತಿಗಳನ್ನು ಬಿಸಾಡಿ ಹೋಗಿರುವ ಜನರ ಕ್ರಮಕ್ಕೆ ಗಣೇಶನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಲುವೆಯಲ್ಲಿ ನೀರಿಲ್ಲ. ನೀರಿಲ್ಲದ ಕಾಲುವೆಯಲ್ಲಿ ಬೇಕಾಬಿಟ್ಟಿಯಾಗಿ ಪಿ.ಓ.ಪಿ ಮೂರ್ತಿಗಳನ್ನು ಇಟ್ಟು ಹೋಗಲಾಗಿದೆ. ಮುದ್ನಾಳ್ ಕ್ರಾಸ್ ನಿಂದ ಕೇವಲ 10 ಕಿ.ಮೀ ಅಂತರದಲ್ಲಿ ಕೃಷ್ಣಾ ನದಿ ಇದೆ. ಆದರೆ ನದಿ ನೀರಿಗೆ ಹಾಕದೆ ಕಾಲುವೆಯಲ್ಲಿ ಗಣಪತಿ ವಿಸರ್ಜನೆ ಮಾಡಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಡಾಂಭಿಕ ಭಕ್ತಿಗಾಗಿ ಗಣಪತಿ ಪ್ರತಿಷ್ಠಾಪನೆ ಮಾಡಿ ಬೇಕಾಬಿಟ್ಟಿಯಾಗಿ ವಿಸರ್ಜನೆ ಮಾಡಲಾಗಿದೆ ಅಂತಾ ಸ್ಥಳೀಯರು ಆರೋಪ ಮಾಡಿದ್ದಾರೆ.