ಟ್ರಕ್ ಚಾಲಕರನ್ನು ಇವರು ಹೇಗೆ ಸುಲಿಯುತ್ತಿದ್ದರು ಗೊತ್ತಾ?
ರಾತ್ರಿ ವೇಳೆ ಟ್ರಕ್ ಚಾಲಕರನ್ನು ಹೆದರಿಸಿ ದರೋಡೆ ಮಾಡುತ್ತಿದ್ದ ಅಂತರಾಜ್ಯ ಕಳ್ಳರನ್ನು ಬಂಧಿಸಲಾಗಿದೆ.
ಹಾವೇರಿ ಜಿಲ್ಲೆ ಪೋಲಿಸರು ಅಂತರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ ತಡಸ ಸರಹದ್ದಿನಲ್ಲಿ ರಾತ್ರಿ ವೇಳೆ ಸಂಚರಿಸುತ್ತಿದ್ದ ಲಾರಿಗಳ ಚಾಲಕರಿಗೆ ಬೆದರಿಸಿ ಹಣ ಮತ್ತು ಮೊಬೈಲ್ ದೋಚುತ್ತಿದ್ದ ಖದೀಮರು ಕೊನೆಗೂ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಹಾವೇರಿ ಬೈಪಾಸ್ ಹತ್ತಿರ ದರೋಡೆಕೋರನ್ನು ಬಂಧಿಸಲಾಗಿದ್ದು ಮಹಮದ ನಫಕಿ, ಮಹಮದ್ ನೌಪಾಲ, ಸಯ್ಯದ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಎರಡು ಕಾರ್ ಸೇರಿದಂತೆ ಎಂಟು ಲಕ್ಷಕ್ಕೂ ಅಧಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಪ್ರಕರಣ ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.