ಆಷಾಢ ರಥೋತ್ಸವಕ್ಕೆ ಆಗ್ರಹಿಸಿ ಹೇಗೆ ಪ್ರತಿಭಟನೆ ನಡೆಯಿತು ಗೊತ್ತಾ?

ಗುರುವಾರ, 26 ಜುಲೈ 2018 (17:20 IST)
ರಾಜ್ಯದ ಗಡಿ ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ವರ್ಷವೂ  ಆಷಾಡ ಮಾಸದ ರಥೋತ್ಸವಕ್ಕೆ ಬ್ರೇಕ್ ಬಿದ್ದಿದೆ. ಕ್ರಮ ವಿರೋಧಿಸಿ ಕನ್ನಡ ಪರ ಸಂಘಟನೆ ಸದಸ್ಯರು ವಿನೂತನವಾಗಿ ಪ್ರತಿಭಟನೆ ನಡೆಸಿದರು. ರಥೋತ್ಸವ ಬಾರಿ ನಿಲ್ಲಿಸಿರುವುದರಿಂದ ಆಕ್ರೋಶಗೊಂಡ ಸ್ಥಳೀಯ ಸಂಘಟಕರು, ಸುಟ್ಟು ಹೋದ ರಥದ ಮುಂದೆ ಅಘೋರಿ ವೇಷ ಧರಿಸಿತೆಂಗಿನ ಕಾಯಿ ಒಡೆದು ಪ್ರತಿಭಟನೆ ನಡೆಸಿದ್ರು.

ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವ ನಡೆಸಲು ಜಿಲ್ಲಾಢಳಿತ ವಿಫಲವಾಗಿದೆ ಎಂದು ಆರೋಪಿಸಿ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು.

ಪ್ರತಿ ವರ್ಷದ ಆಷಾಡ ಮಾಸದಲ್ಲಿ ನಡೆಯುತ್ತಿದ್ದ ಚಾಮರಾಜೇಶ್ವರ ರಥೋತ್ಸವವನ್ನ, ರಥ ದುರಸ್ಥಿ ಆಗದ ಕಾರಣ ಬಾರಿಯೂ ನಡೆಸಲಾಗುತ್ತಿಲ್ಲ. ಚಾಮರಾಜನಗರ ಪಟ್ಟಣದಲ್ಲಿ ನಡೆಯುತ್ತಿದ್ದ ರಥೋತ್ಸವ ಬಾರಿ ನಿಲ್ಲಿಸಿರುವುದರಿಂದ ಆಕ್ರೋಶಗೊಂಡ ಸ್ಥಳೀಯ ಸಂಘಟಕರು, ಸುಟ್ಟು ಹೋದ ರಥದ ಮುಂದೆ ಅಘೋರಿ ವೇಷ ಧರಿಸಿತೆಂಗಿನ ಕಾಯಿ ಒಡೆದು ಪ್ರತಿಭಟನೆ ನಡೆಸಿದ್ರು.

ದೇವಸ್ಥಾನ ಜೀರ್ಣೋದ್ಧಾರದ ನೆಪದಲ್ಲಿ ರಥೋತ್ಸವಕ್ಕೆ ಕಡಿವಾಣ ಹಾಕಲಾಗಿದ್ದು, ನವ ಜೋಡಿಗಳಿಗೆ ಆಷಾಡ ಮಾಸದಲ್ಲಿ ಒಂದಾಗಿಸುತ್ತಿದ್ದ ರಥೋತ್ಸವಕ್ಕೆ ಬ್ರೇಕ್ ಬಿದ್ದಿರುವುದರಿಂದ ಸಾರ್ವಜನಿಕರಲ್ಲಿ ನಿರಾಶೆ ಮನೆಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ