ಕೆಜಿಎಫ್ ಹವಾ ಜೋರಾಗುತ್ತಿದೆ ಗೊತ್ತಾ?

ಮಂಗಳವಾರ, 13 ನವೆಂಬರ್ 2018 (20:02 IST)
ಕೆಜಿಎಫ್ ಚಲನಚಿತ್ರ ಬಿಡುಗಡೆಗೂ ಮೊದಲೇ ದಾಖಲೆ ನಿರ್ಮಿಸುತ್ತಿದೆ. ಚಿತ್ರದ ಟ್ರೇಲರ್ನ್ನು 2 ಕೋಟಿಗೂ ಅಧಿಕ ಮಂದಿ ವೀಕ್ಷಿಸಿ ಮತ್ತೊಂದು ದಾಖಲೆ ಮಾಡಿದೆ.

ಕೆಜಿಎಫ್ ಟ್ರೇಲರ್ ಐದೂ ಭಾಷೆಗಳಲ್ಲಿ ತೆರೆಕಂಡಿದೆ. ಕೆಲವೇ ದಿನಗಳಲ್ಲಿ ಚಿತ್ರದ ಟ್ರೇಲರ್ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಐದು ಭಾಷೆಗಳಲ್ಲಿ ತೆರೆಕಂಡಿರುವ ಟ್ರೇಲರ್ ಒಟ್ಟು ವೀಕ್ಷಣೆ 2 ಕೋಟಿಯ ಗಡಿ ದಾಟಿದ್ದು, ಶಾರೂಖ್ ಖಾನ್ ಅಭಿನಯದ ಜಿರೋ ಹಾಗೂ ರಜನೀಕಾಂತ್ ಅಭಿನಯದ 2.0 ಚಿತ್ರಗಳಿಗೆ ಮತ್ತೆ ನಡುಕು ಹುಟ್ಟಿಸುವಂತಾಗಿದೆ.

ಕೆಜಿಎಫ್ಚಿತ್ರದ ಟ್ರೇಲರ್ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯೆ ಸಿನಿಮಾ ತೆರೆಕಾಣುವುದಕ್ಕೂ ಮೊದಲೇ ದಾಖಲೆಯ ಮೇಲೆ ದಾಖಲೆ ಸೃಷ್ಟಿಯಾಗುತ್ತಿದೆ. ಅಚ್ಚರಿ ಏನೆಂದರೆ ಕನ್ನಡ ಸಿನಿಮಾವೊಂದು ರೀತಿ ದಾಖಲೆ ಮಾಡುತ್ತಿರುವುದು ಇದೇ ಮೊದಲು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ