ಹಳ್ಳಿಗಳ ಕಡೆ ಮುಖಮಾಡಿದ ಸಚಿವ: ಅಭಿವೃದ್ಧಿ ಪರಿಶೀಲನೆ

ಬುಧವಾರ, 29 ಆಗಸ್ಟ್ 2018 (15:41 IST)
ಗ್ರಾಮೀಣಾಭಿವೃದ್ಧಿ , ಪಂಚಾಯತ್ ರಾಜ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ  ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ. ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 
ಹುಬ್ಬಳ್ಳಿಯ ಯರಿನಾರಾಯಣಪುರ ಮತ್ತು ಇತರ 14 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆಯ ಸ್ಥಳಕ್ಕೆ ಸಚಿವ ಕೃಷ್ಣ ಭೈರೇಗೌಡ ಭೇಟಿ ನೀಡಿದರು. ಶುದ್ಧ ಕುಡಿಯುವ ನೀರು ಘಟಕ, ಕಿರೇಸೂರ ಗ್ರಾ.ಪಂ. ಗೆ ಭೇಟಿ ನೀಡಿ ಗ್ರಾಮದ ಜನಸಂಖ್ಯೆ, ಸಿಬ್ಬಂದಿ, ಸ್ವಚ್ಛ ಭಾರತ ಯೋಜನೆಯಲ್ಲಿ ನಿರ್ಮಿಸಿದ ಶೌಚಾಲಯಗಳನ್ನು ಸಾರ್ವಜನಿಕರು ಬಳಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಜಾಗೆ ಕೊರತೆ ಇರುವಲ್ಲಿ ವ್ಯಯಕ್ತಿಕ ಶೌಚಾಲಯಗಳನ್ನು ಸಾಲಾಗಿ ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಬೇಕು. ಸಾಮೂಹಿಕ ಶೌಚಾಲಯಗಳನ್ನು ಕಟ್ಟದಿರಲು ಸಚಿವರು ಸೂಚನೆ ನೀಡಿದರು. ಕಸ ವಿಲೇವಾರಿ ,ಮನೆಗಳ ಕಸ ನಿರ್ವಹಣೆ ವ್ಯವಸ್ಥಿತವಾಗಿ ನಡೆಯುತ್ತಿದೆಯೇ ಎಂದು ಮಾಹಿತಿ ಪಡೆದರು.  ನರೇಗಾ ಯೋಜನೆಯಡಿ ನಿರ್ಮಿಸಲಾಗಿರುವ ರೈತರ ಕಣ ಮತ್ತು ಸಿಸಿ ರಸ್ತೆಗಳನ್ನು ಪರಿಶೀಲಿಸಿದರು. ಕಿರೇಸೂರಿನಲ್ಲಿ ಸಸಿಗಳನ್ನು ನೆಟ್ಟು, ಶುದ್ಧ ಕುಡಿಯುವ ನೀರು ಘಟಕದ ಕಾರ್ಯ ವೀಕ್ಷಿಸಿದರು.

ಪ್ರತಿವರ್ಷ ಗ್ರಾಮದ ಜಾಬ್ ಕಾರ್ಡುಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ 4 ಕೋಟಿ ರೂ.ಖರ್ಚು ಮಾಡಲು ಅವಕಾಶವಿದೆ. ಕನಿಷ್ಠ 1 ಕೋಟಿ ರೂ.ಗಳನ್ನಾದರೂ ಖರ್ಚು ಮಾಡಿ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ