ಅಲ್ಲಿನ ಎರಡು ಗ್ರಾಮಗಳ ಜನರು ಆನೆಗಳೆಂದರೆ ಸಾಕು, ಈಗ ಗಾಬರಿಗೆ ಒಳಗಾಗುತ್ತಿದ್ದಾರೆ.
ಆನೆಗಳು ಬಂದಿವೆ ಎಂಬ ಸುದ್ದಿ ಅವರ ಕಿವಿಗೆ ಬೀಳೋದೆ ತಡ, ಅವರು ಗಾಬರಿಯಾಗುತ್ತಿದ್ದಾರೆ. ಬಾಳೆ ಹಾಗೂ ಅಡಿಕೆ ತೋಟಕ್ಕೆ ಕಾಡಾನೆಗಳು ನುಗ್ಗಿ ದಾಂಧಲೆ ಮಾಡಿ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ ಮಾಡಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬೈರಾಪುರ ಹಾಗೂ ದ್ಯಾಂಪುರದಲ್ಲಿ ಘಟನೆ ನಡೆದಿದೆ. ಎರಡು ಗ್ರಾಮಗಳ ಹತ್ತಾರು ತೋಟಗಳಲ್ಲಿ ಎರಡು ಕಾಡಾನೆಗಳು ದಾಳಿ ನಡೆಸಿದ್ದು ಅಡಿಕೆ, ಬಾಳೆ, ತೆಂಗು ಬೆಳೆ ಸಂಪೂರ್ಣ ನಾಶವಾಗಿದೆ. ದ್ಯಾಂಪುರ ಹಾಗೂ ಬೈರಾಪುರ ಗ್ರಾಮದ ಯಶೋಧರಮೂರ್ತಿ, ಮಹೇಶ್, ಮಂಜಪ್ಪ, ಅಶೋಕ್ ಎಂಬುವರ ತೋಟಕ್ಕೆ ನುಗ್ಗಿದ್ದ ಕಾಡಾನೆಗಳು ಹತ್ತಾರು ಎಕರೆಯಲ್ಲಿ ಬೆಳೆದ ವಿವಿಧ ಬೆಳೆಗಳನ್ನು ಹಾಳುಮಾಡಿವೆ.
ಇದರಿಂದ ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದ್ದು, ಕಷ್ಟಪಟ್ಟು ಬೆಳೆದ ಬೆಳೆ ಕಾಡಾನೆಯಿಂದ ನಾಶವಾಗುತ್ತಿರುವುದರಿಂದ ಅರಣ್ಯಾಧಿಕಾರಿಗಳು ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೂಡಲೇ ಕಾಡಾನೆಯನ್ನ ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.