ವಾಸ್ತುಶಾಸ್ತ್ರದ ಪ್ರಕಾರ ಈ ಗಿಡಮರಗಳನ್ನು ಮನೆಯ ಮುಂದೆ ಬೆಳೆಸುವುದರಿಂದ ಶುಭವಂತೆ

ಭಾನುವಾರ, 13 ಜನವರಿ 2019 (07:35 IST)
ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಜನರು ಪ್ರಾಣಿ, ಪಕ್ಷಿ, ಗಿಡಮರಗಳನ್ನು ದೇವರೆಂದು ಪೂಜಿಸುತ್ತಾರೆ. ಹಾಗೇ ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ಗಿಡಮರಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಶುಭದಾಯಕವಾಗಿದೆ. ಆ ಗಿಡಮರಗಳ ಯಾವುದೆಂದು ತಿಳಿಯೋಣ.


ತುಳಸಿ ಗಿಡ : ತುಳಸಿ ಗಿಡದಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ. ಹಾಗೇ ಇದರಲ್ಲಿ  ಔಷಧಿಯ ಗುಣವಿದೆ. ಆದ್ದರಿಂದ ಇದನ್ನು ಮನೆಯ ಮುಂದೆ ಬೆಳೆಸುವುದರಿಂದ ನಕರಾತ್ಮಕ ಶಕ್ತಿ ಮನೆಯ ಮುಂದೆ ಬರುವುದಿಲ್ಲ. ಹಾಗೇ ಇದರಿಂದ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆ  ಉಂಟಾಗುವುದಿಲ್ಲ.


ಬಾಳೆಗಿಡ : ಬಾಳೆಗಿಡದಲ್ಲಿ ವಿಷ್ಣು ನೆಲೆಸಿರುವುದರಿಂದ ಇದನ್ನು ಮನೆಯ ಬಳಿ ನೆಡುವುದರಿಂದ ಸಕರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸಿರುತ್ತದೆ.


ನೆಲ್ಲಿಕಾಯಿ ಮರ : ಈ ಮರದಲ್ಲಿ ಕೂಡ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ. ಈ ಮರಕ್ಕೆ ಪ್ರತಿದಿನ ದೀಪಾರಾಧನೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆಯಂತೆ. 


ಅಶೋಕ ಮರ : ಈ ಮರವನ್ನು ಮನೆಯ ಬಳಿ ನೆಟ್ಟು ಅದರ ಬಳಿ ನಮ್ಮ ಕಷ್ಟಗಳನ್ನು ಹೇಳಿಕೊಂಡರೆ ಆ ಕಷ್ಟಗಳು ದೂರವಾಗುತ್ತದೆಯಂತೆ.


ಬಿಲ್ವಪತ್ರೆ ಮರ : ಇದು ಶಿವನಿಗೆ ಪ್ರಿಯವಾದ ಮರವಾದ್ದರಿಂದ ಇದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಟ್ಟರೆ ಒದಗಿ ಬರುವ ತೊಂದರೆಗಳು ದೂರವಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ