ಬಂಡಿಯಲ್ಲಿ ದ್ದ ಹಣ್ಣು ತಿಂದ ಹಸುವಿಗೆ ಮಾರಾಟಗಾರ ಮಾಡಿದ್ದೇನು ಗೊತ್ತಾ?

ಶನಿವಾರ, 20 ಫೆಬ್ರವರಿ 2021 (12:03 IST)
ಮುಂಬೈ : 35 ವರ್ಷದ ಹಣ್ಣು ಮಾರಾಟಗಾರನೊಬ್ಬ ತನ್ನ ಬಂಡಿಯಲ್ಲಿ ದ್ದ ಪಪ್ಪಾಯ ಹಣ್ಣನ್ನು ತಿಂದ ಹಸುವಿಗೆ ಚಾಕುವಿನಿಂದ ಇರಿದ ಘಟನೆ ಮಹಾರಾಷ್ಟ್ರದ ಮುಂಬೈನ ರಾಯಗಡ್ ಜಿಲ್ಲೆಯ ಮುರುದ್ ಪಟ್ಟಣದಲ್ಲಿ ನಡೆದಿದೆ.

ಮಾರಾಟಗಾರ ಹಣ್ಣು ಮಾರುತ್ತಿದ್ದಾಗ ಅಲ್ಲಿಗೆ ಬಂದ ಹಸು ಆತನ ಬಂಡಿಯಲ್ಲಿದ್ದ ಪಪ್ಪಾಯ ಹಣ್ಣನ್ನು ತಿಂದಿದೆ. ಇದರಿಂದ ಕೋಪಗೊಂಡ ಆತ ಚಾಕುವಿನಿಂದ ಗಹಸುವಿನ ಹೊಟ್ಟೆ ಮತ್ತು ಇತರ ಅಂಗಗಳಿಗೆ ಇರಿದಿದ್ದಾನೆ. ಬಳಿಕ ಹಸುವಿನ ಗಾಯಗಳಿಗೆ ಚಿಕಿತ್ಸೆ ನೀಡಿದ ಮಾಲೀಕ ಹಣ್ಣು ಮಾರಾಟಗಾರನ ಮೇಲೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ