ಬೇಸರವಾದಾಗ ಪ್ರಾದೇಶಿಕ ಆಯಕ್ತ ಟ್ವಿಟ್ ಮಾಡಿದ್ದೇನು ಗೊತ್ತಾ?
ಬುಧವಾರ, 17 ಅಕ್ಟೋಬರ್ 2018 (17:51 IST)
ಕಲಬುರ್ಗಿ ಪ್ರಾದೇಶಿಕ ಆಯುಕ್ತ, ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(HKRDB) ಕಾರ್ಯದರ್ಶಿ ಸುಬೋದ್ ಯಾದವ್ ಅವರು ಕಚೇರಿಯಲ್ಲಿನ ಘಟನೆ ಬಗ್ಗೆ ಟ್ವಿಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅಕ್ಟೋಬರ್ 15 ರಂದು ರಾತ್ರಿ 9.23ಕ್ಕೆ ಟ್ವೀಟ್ ಮಾಡಿರೋ ಸುಬೋದ್ ಯಾದವ್, ಇಂದು ಕಚೇರಿಯಲ್ಲಿ ಅತ್ಯಂತ ಕೆಟ್ಟ ದಿನ ಎದುರಿಸಿದೆ. ಕೆಲವು ಸಲ ನೀವು ಏನೇ ಮಾಡಿದರೂ ಅದು ಗಣನೆಗೆ ಬರೋದಿಲ್ಲ. ಕೆಲವು ಅನಗತ್ಯ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತೆ. ಹೋಗಲಿ ಬಿಡಿ ಅದೇ ಜೀವನ, ಸದಾ ಸಿಹಿಯಾಗಿರುವುದಿಲ್ಲ. ಯಾವುದಾದರೂ ಕೆಲಸದಲ್ಲಿ ಭಾವೋದ್ವೇಗದಿಂದ ತೊಡಗಿದಾಗ ಹೀಗಾದರೆ ನೋವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಸುಬೋದ್ ಯಾದವ್ ಅವರ ಟ್ವೀಟ್ಗೆ ಹಲವರು ಬೆಂಬಲ ನೀಡಿದ್ದು, ಸಾಂತ್ವನ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕಲಬುರ್ಗಿ ಪ್ರಾದೇಶಿಕ ಆಯುಕ್ತ, HKRDB ಕಾರ್ಯದರ್ಶಿಯಾಗಿ ಸುಬೋದ್ ಯಾದವ್ ವರ್ಗಾವಣೆಯಾಗಿದ್ದರು. ಸುಬೋದ್ ಯಾದವ್ ದಕ್ಷತೆಗೆ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರೋ ಅಧಿಕಾರಿ. ವರ್ಗಾವಣೆ ವೇಳೆ ಸುಬೋದ್ ಯಾದವ್ ಟ್ವಿಟ್ಟರ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದರು. ಸದ್ಯ ಸುಬೋದ್ ಯಾದವ್ ಈ ರೀತಿ ಟ್ವೀಟ್ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದ್ದು, ಟ್ವಿಟ್ಟರ್‌ನಲ್ಲಿ ಈ ಕುರಿತು ಭಾರಿ ಚರ್ಚೆ ಶುರುವಾಗಿದೆ.