ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಈ ವರ್ಷ ಸೆಪ್ಟೆಂಬರ್ ನಲ್ಲೂ ಮಳೆ ಬಗ್ಗೆ ಹವಾಮಾನ ವರದಿಗಳು ಎಚ್ಚರಿಕೆ ನೀಡಿವೆ.
ರಾಜ್ಯದಲ್ಲಿ ಆಗಸ್ಟ್ 27 ರಿಂದ ಮತ್ತೆ ಭಾರೀ ಮಳೆಯಾಗುತ್ತಿದೆ. ವಿಶೇಷವಾಗಿ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಅಪರಾಹ್ನದ ನಂತರ ಭಾರೀ ಮಳೆಯಾಗುತ್ತಿದೆ.
ಇಂದೂ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಇಂದೂ ಭಾರೀ ಮಳೆಯಾಗಲಿದೆ. ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಾವಣಗೆರೆ, ಬಾಗಲಕೋಟೆಯಲ್ಲೂ ಮಳೆಯಾಗಲಿದೆ.
ಲಾ ನಿನಾ ಚಂಡಮಾರುತ ಪ್ರಭಾವದಿಂದ ಭಾರೀ ಮಳೆಯಾಗುತ್ತಿದೆ. ಹವಾಮಾನ ವರದಿಗಳ ಪ್ರಕಾರ ಈ ಬಾರಿ ಸೆಪ್ಟೆಂಬರ್ ನಂತರವೂ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಅಕ್ಟೋಬರ್ ವರೆಗೂ ಈ ವರ್ಷ ವರ್ಷಧಾರೆ ಮುಂದುವರಿಯುವ ಸಾಧ್ಯತೆಯಿದೆ.