ಇಲ್ಲಿ ಮಹಿಳೆಯರೂ ಕೊರೊನಾ ಸೈನಿಕರು!

ಶನಿವಾರ, 4 ಏಪ್ರಿಲ್ 2020 (14:15 IST)
ಕೊರೊನಾ ವೈರಸ್ ತಡೆಗೆ ವಿಶೇಷವಾಗಿ ಕೊರೊನಾ ಸೈನಿಕರು ಸಿದ್ಧರಾಗಿದ್ದಾರೆ.

ಕೋವಿಡ್ -19 ಬಗ್ಗೆ ಹರಡುವ ವಂದತಿ ಹಾಗೂ ಅಪಪ್ರಚಾರವನ್ನು ತಡೆದು ಜನರಿಗೆ ನೈಜ ಮಾಹಿತಿ ಒದಗಿಸಲು ಹಾವೇರಿ ಜಿಲ್ಲೆಯಲ್ಲಿ ಮೂವರು ಮಹಿಳಾ ಸೈನಿಕರು ಸೇರಿದಂತೆ 125 ಕೊರೋನಾ ಸೈನಿಕರು ಸಜ್ಜಾಗಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರಾಜ್ಯ ಕಾರ್ಮಿಕ ತರಬೇತಿ ಸಂಸ್ಥೆ ಸಹಯೋಗದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಆಯ್ಕೆಯಾದ ಸೈನಿಕರು ಕೊರೋನಾ ವಂದತಿಗಳ ವಿರುದ್ಧ ಹೋರಾಡಲು 'ಕೊರೋನಾ ಸೈನಿಕ' ಅಭಿಯಾನ ಜಾರಿಗೆ ತರಲಾಗಿದೆ. ಈವರೆಗೆ 40 ಕ್ಕೂ ಹೆಚ್ಚು ಕೊರೋನಾ ಸೈನಿಕರಿಗೆ ಗುರುತಿನ ಚೀಟಿ ನೀಡಲಾಗಿದೆ.

ಕೊರೋನಾ ವೈರಸ್ ಕುರಿತು ವಿವಿಧ ಮಾಧ್ಯಮ ಹಾಗೂ ಸಮಾಜಿಕ ಜಾಲತಾಣಗಳಲ್ಲಿ ಮೂಡಿಬರುವ ವದಂತಿಗಳ ಬಗ್ಗೆ  ಕೊರೋನಾ ಸೈನಿಕರು ಪರಾಮರ್ಶಿಸಿ, ನೈಜ ಮಾಹಿತಿ ಕೊಡಲಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಯಾವುದೇ ವಿದ್ಯಮಾನ ಗಮನಕ್ಕೆ ಬಂದಲ್ಲಿ  ಸ್ಥಳಕ್ಕೆ ಹೋಗಿ ಸತ್ಯಾಸತ್ಯತೆಯನ್ನು ತಿಳಿಸಲಿದ್ದಾರೆ. ಜನರಲ್ಲಿ ಅನಗತ್ಯ ಆತಂಕ ಮೂಡುವುದನ್ನು ತಪ್ಪಿಸುವ ಕೆಲಸ ಮಾಡಲಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ