ಶೀಲ ಶಂಕಿಸಿದ ಪತಿ ಮಾಡಿದ ಕೆಲಸವೇನು ಗೊತ್ತಾ?
ಹರಪ್ಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದ ತಿಪ್ಪನಾಯ್ಕ್ ಪತ್ನಿ ಲಕ್ಷ್ಮೀಬಾಯಿಗೆ ಬೆಂಕಿ ಹಚ್ಚಿರುವ ಪತಿ. ಈ ದಂಪತಿಗೆ ಆರು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಬ್ಬ ಮಗ ಕೂಡ ಇದ್ದಾನೆ
ಪ್ರತಿನಿತ್ಯ ಕುಡಿದು ಲಕ್ಷ್ಮಿಬಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ ಆರೋಪಿ ತಿಪ್ಪನಾಯ್ಕ್ ಪತ್ನಿ ಶೀಲ ಶಂಕಿಸಿ ಒಂದೆಡರು ಬಾರಿ ಸೀಮೆ ಎಣ್ಣೆ ಸುರಿದು ಕೊಲೆಗೂ ಯತ್ನಿಸಿದ್ದಾನೆ. ಇದರಿಂದ ಬೇಸತ್ತ ಲಕ್ಷ್ಮಿಬಾಯಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಪತಿಯ ಮನವೊಲಿಕೆಯಿಂದ ವಾಪಸ್ ಮನೆಗೆ ಬಂದಿದ್ದ ಲಕ್ಷ್ಮಿಬಾಯಿಯನ್ನು ಕೂಲಿ ಕೆಲಸಕ್ಕೆ ಹೋಗುವಾಗ ತಡೆದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.